ಕಡಬ:ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ 64 ನೇ ವರ್ಷದ ಏಕಾಹ ಭಜನ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.


ಅಧ್ಯಕ್ಷರಾಗಿ ಶ್ರೀಕೃಷ್ಣ ಎಂ.ಆರ್, ಕಾರ್ಯ ದರ್ಶಿಯಾಗಿ ರಾಮಚಂದ್ರ ಸನಿಲ, ಕೋಶಾಧಿ ಕಾರಿಯಾಗಿ ಅಶೋಕ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಮಹೇಶ್ ಕುಕ್ಕಾಯಿಲ ಆಯ್ಕೆಯಾಗಿದ್ದಾರೆ.






ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಈ ಸಭೆಯಲ್ಲಿ ಪ್ರಮುಖರಾದ ಚಂದ್ರಶೇಖರ ಕರ್ಕೇರ, ವಿಜಯ ಕುಮಾರ್ ರೈ ಕರ್ಮಾಯಿ, ಕೃಷ್ಣಶೆಟ್ಟಿ ಕಡಬ, ಸೋಮಪ್ಪ ನ್ಯಾಕ್, ದುರ್ಗಾಪ್ರಸಾದ್ ಕೆ.ಪಿ., ಸದಾನಂದ ಗೌಡ ಸಾಂತ್ಯಡ್ಕ ಅಶೋಕ್ ಕುಮಾರ್ ರೈ, ಆರಕ್ಷಕ ಸಿಬಂದಿ ಮಹೇಶ್ ಎಚ್. ಬಿ., ರಾಕೇಶ್ ಕಳಾರ, ಕಮಲ ಪಿ. ಪಣೆಮಜಲು, ಗೀತಾ ಲೋಕೇಶ್ ಪಣೆಮಜಲು, ಸದಾನಂದ ಪಿ., ಪ್ರಕಾಶ್ ಎನ್.ಕೆ., ಸುಖೇಶ್ ಕುಮಾರ್, ಹರಿಪ್ರಸಾದ್ ರೈ, ಯಶೋಧರ ಪಿ., ದಿನೇಶ ರೈ ಕಳಾರ, ಮೋಹನ, ರಕ್ಷಿತ್ ರೈ, ಅಜಿತ್ ರೈ ಅರ್ತಿಲ, ಗಿರೀಶ್ ಎ.ಪಿ. ಆರಿಗ, ಕಿಶನ್ ಕುಮಾರ್ ರೈ, ಶೀನ ನಾಯ್ಕ ಬೆದ್ರಾಜೆ ಮತ್ತಿತರರು ಉಪಸ್ಥಿತರಿದ್ದರು.