ಕಡಬ ಟೈಮ್, ಪ್ರಮುಖ ಸುದ್ದಿ: ಮಸೀದಿಯಲ್ಲಿ ಊಟದ ಕಿಟ್ ನೀಡುವ ವಿಚಾರದಲ್ಲಿ ತಗಾದೆ ತೆಗೆದು ದೂಡಿ ಹಾಕಿ ನಿಂದಿಸಿ ಬೆದರಿಕೆ ಆರೋಪದ ಮೇರೆಗೆ ವ್ಯಕ್ತಿಯೊಬ್ಬನ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿ ಓದಿರಿ: ಕಡಬ: ಸಂಪ್ರದಾಯದ ಹೆಸರಿನಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೋಳಿ ಅಂಕಗಳು


ಕೊಯಿಲ ಗ್ರಾಮದ ಆತೂರು ಬದ್ರಿಯಾ ಜುಮ್ಮ ಮಸೀದಿ ಯಲ್ಲಿ ರಂಜಾನ್ ಉಪವಾಸದ ದಿನಗಳಿರುವುದರಿಂದ ಸಂಜೆ ಸಮಯ ಉಪವಾಸ ಬಿಡುವ ಸಮಯದಲ್ಲಿ ಮಸೀದಿಗೆ ಪ್ರಾರ್ಥನೆಗೆ ಬರುವವರಿಗೆ ಊಟದ ಕಿಟ್ ನೀಡುವ ವ್ಯವಸ್ಥೆಯ ಉಸ್ತುವಾರಿಯನ್ನು ಮಸೀದಿಯಲ್ಲಿ ನಸೀರ್ ಎಂಬುವವರು ಆತೂರಿನ ಝೈನುದ್ದೀನ್ ಎಂಬವರಿಗೆ ವಹಿಸಿಕೊಟ್ಟಿದ್ದರು.


ಮಾ.11 ರ ಸಂಜೆ ಊಟದ ಕಿಟ್ ನ್ನು ತಯಾರು ಮಾಡಿಕೊಂಡಿರುವ ಸಮಯದಲ್ಲಿ ಪರಿಚಯದ ನವಾಜ್ ಎಂಬಾತ ಮಸೀದಿಯಲ್ಲಿ ಊಟದ ಕಿಟ್ ತಯಾರು ಮಾಡುವಲ್ಲಿಗೆ ಬಂದು ಝೈನುದ್ದೀನ್ ಬಳಿ ಊಟದ ಕಿಟ್ ಕೊಡಿ ಎಂದು ಕೇಳಿದಾಗ ಅದಕ್ಕೆ ನಮಾಜ್ ಪ್ರಾರ್ಥನೆ ಮುಗಿದ ಬಳಿಕ ಊಟದ ಕಿಟ್ ಕೊಡುತ್ತೇನೆ ಈಗ ಕೊಡಲು ಆಗುವುದಿಲ್ಲ ಎಂದು ಹೇಳಿ ಅಲ್ಲಿಂದ ಹೊರಗೆ ಹೋಗಿದ್ದರು.
ಈ ಸುದ್ದಿ ಓದಿರಿ:ರಾತ್ರಿ ವೇಳೆ ಅಂಗಡಿ ಕಳ್ಳತನ ಮಾಡುತ್ತಿರುವಾಗಲೇ ಇಬ್ಬರನ್ನು ಹಿಡಿದ ಊರಿನ ಜನರು


ವಾಪಾಸ್ ಬರುವಾಗ ಆರೋಪಿಯು ಝೈನುದ್ದೀನ್ ಅವರನ್ನು ತಡೆದು ನಿಲ್ಲಿಸಿ ಆತೂರಿನಲ್ಲಿ ನೀನು ದೊಡ್ಡ ಜನವ ಎಂದು ಹೇಳಿ ಕೈಯಿಂದ ಕೆನ್ನೆಗೆ ಹೊಡೆದು ಗೋಡೆಯ ಮೇಲೆ ದೂಡಿ ಹಾಕಿ ಅವರೊಳಗೆ ಉರುಳಾಟವಾಗಿದ್ದು ನಂತರ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 20/2025 ಕಲಂ: 126(2), 115 (2), 352, 351(3) BNS-2023. ಯಂತೆ ಪ್ರಕರಣ ದಾಖಲಾಗಿರುತ್ತದೆ.