ಕಡಬ ಟೈಮ್, ಪ್ರಮುಖ ಸುದ್ದಿ:ಅವಿವಾಹಿತ ಯುವತಿಯೋರ್ವಳು ಗರ್ಭಿಣಿಯಾಗಿರುವ ವಿಚಾರ ಕಡಬ ಠಾಣಾ ವ್ಯಾಪ್ತಿಯ ಗ್ರಾಮವೊಂದರಿಂದ ತಿಳಿದು ಬಂದಿತ್ತು .ವೈದ್ಯಾಧಿಕಾರಿಗಳು ಆಕೆಯನ್ನು ಪರೀಕ್ಷಿಸಿ ಬಳಿಕ ಕಡಬ ಠಾಣೆಗೆ ಮಾಹಿತಿ ರವಾನಿಸಿ ಇಂದಿಗೆ 11 ದಿನಗಳಾದರೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಈ ಘಟನೆ ಸುತ್ತ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ.


ತಿಂದ ಆಹಾರವೆಲ್ಲ ವಾಂತಿಯಾದ ಹಿನ್ನೆಲೆ ಅವಿವಾಹಿತ ಯುವತಿ ಫೆ.3 ರಂದು ತನ್ನ ತಾಯಿ ಜೊತೆ ಕಡಬದ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆಗೆಂದುಬಂದಿದ್ದರು. ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಯುವತಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು . ಆಶಾ ಕಾರ್ಯಕರ್ತೆಯು ವೈದ್ಯಾಧಿಕಾರಿಯವರಿಗೆ ಈ ಬಗ್ಗೆ ಪ್ರಾಥಮಿಕ ವರದಿಯನ್ನು ಗರ್ಭಿಣಿ ಯುವತಿಯ ಹೇಳಿಕೆಯನ್ನಧಾರಿಸಿ ವೈದ್ಯಾಧಿಕಾರಿಗಳು ಪರೀಕ್ಷಿಸಿ ಗರ್ಭವತಿಯಾದ ಸಂದರ್ಭದಲ್ಲಿ ಆಕೆಗೆ 18 ವರ್ಷ ತುಂಬದ ಬಗ್ಗೆ ಜೊತೆಗೆ ತಾಯಿ ಕಾರ್ಡು ಮಾಡಿಸಿರುವುದಾಗಿ ಉಲ್ಲೇಖಿಸಿ ಪೊಲೀಸರಿಗೆ ಮತ್ತು ಐಸಿಡಿಎಸ್ ಗೆ ಮಾಹಿತಿ ನೀಡಿರುವುದಾಗಿ ಪಾಲನಾ ವರದಿ ನೀಡಿದ್ದರು.


ಮಾದ್ಯಮ ವರದಿಗಳ ಬಳಿಕ ಬಾಡಿಗೆ ರೂಂ ನೀಡಿದ ವ್ಯಕ್ತಿಯನ್ನು ಪೊಲೀಸರು ಕರೆತಂದು ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿದು ಬಂದಿದೆ. ಆದರೆ ಆ ಗ್ರಾಮದ ಜೆಸಿಬಿ ಡ್ರೈವರ್ ನಿಂದ ಈ ಅತ್ಯಾಚಾರ ಕೃತ್ಯ ನಡೆದಿರುವುದಾಗಿ ಹೇಳಾಗುತ್ತಿದ್ದು ಆತನ ಜಾಡನ್ನು ಇನ್ನೂ ಪೊಲೀಸರು ಹಿಡಿದಿಲ್ಲ. ಹೀಗಾಗಿ ಪೊಲೀಸರ ನಡೆಯ ಬಗ್ಗೆ ಜನರು ಲಘುವಾಗಿ ಮಾತನಾಡುವಂತಾಗಿದೆ.


ಗರ್ಭಿಣಿ ಯುವತಿ ಸಹಿತ ಆಕೆಯ ತಾಯಿಯನ್ನು ಬಾಡಿಗೆ ಮನೆಯಿಂದ ಗಡಿಪಾರು ಮಾಡಲಾಗಿದ್ದು ಇದರ ಹಿಂದೆ ಆರೋಪಿತ ಯುವಕನನ್ನು ರಕ್ಷಿಸುವ ತಂತ್ರ ಅಡಗಿದೆ ಎಂಬ ಸಂಶಯ ಸಾರ್ವಜನಿಕರಲ್ಲಿ, ಗ್ರಾಮದ ನಿವಾಸಿಗಳಲ್ಲಿ ದಟ್ಟವಾಗಿದೆ.


ಕಡಬ ಪೊಲೀಸರು ಗ್ರಾಮ ತೊರೆದ ಯುವತಿಯನ್ನು ಪತ್ತೆ ಹಚ್ಚಲು ಪ್ರಯತ್ನ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಕಾರ್ಯವೂ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಈ ಗಂಭೀರ ಪ್ರಕರಣದ ಜಾಡು ಹಿಡಿಯಲು ಪೊಲೀಸರು ವಿಳಂಬ ಮಾಡುತ್ತಿರುವ ಆರೋಪಗಳು ಜನರಿಂದಲೇ ಕೇಳಿ ಬರುತ್ತಿದೆ. ಸೂಕ್ತ ತನಿಖೆಯ ಮೂಲಕ ಜನರ ಸಂಶಯ, ಆರೋಪಗಳಿಗೆ ಕಡಬ ಪೊಲೀಸರೇ ಸರಿಯಾದ ಉತ್ತರ ನೀಡಬೇಕಿದೆ.