24.8 C
Kadaba
Saturday, March 15, 2025

ಹೊಸ ಸುದ್ದಿಗಳು

ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿ:ಹಸಿಮೀನು ಮಾರಾಟ ಏಲಂ ನಲ್ಲಿ ಅಧಿಕಾರಿಗಳನ್ನೇ ನಿಬ್ಬೆರಗಾಗುವಂತೆ ಮಾಡಿದ ಆ ದಾಖಲೆ ಮೊತ್ತ

Must read

 ಕಡಬ:
ನೂಜಿಬಾಳ್ತಿಲ
ಗ್ರಾ.ಪಂ ವ್ಯಾಪ್ತಿಯಲ್ಲಿ
 ಮುಂದಿನ
ಒಂದು ವರ್ಷಗಳ ಕಾಲ ಹಸಿ ಮೀನು ಮಾರಾಟ ಮಾಡುವ ಸಲುವಾಗಿ ಗ್ರಾ.ಪಂ  ಕಚೇರಿಯಲ್ಲಿ
ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ದಾಖಲೆ ಮೊತ್ತಕ್ಕೆ ಬಿಡ್ ಆಗಿದೆ.

kadabatimes.in


kadabatimes.in

ಗ್ರಾ.ಪಂ
ವ್ಯಾಪ್ತಿಯಲ್ಲಿ
ಮೀನು
ಮಾರಾಟ ಮಾಡಲು ಹಕ್ಕುಸ್ವಾಮ್ಯಕ್ಕಾಗಿ ಬಹಿರಂಗ ಹರಾಜು ಮಾಡುವ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಕಳೆದ ಬಾರಿ ಒಂದು ವರ್ಷದ ಅವಧಿಗೆ 2.80 ಲಕ್ಷ ಮೊತ್ತಕ್ಕೆ ಬಿಡ್ ಆಗಿದ್ದ ಹಿನ್ನೆಲೆಯಲ್ಲಿ ಇಂದಿನ ಹರಾಜು ಪ್ರಕ್ರಿಯೆ ಕುತೂಹಲ ಮೂಡಿಸಿತ್ತಲ್ಲದೇ 14 ಮಂದಿ ಹರಾಜಿನಲ್ಲಿ ಭಾಗವಹಿಸಲು ಠೇವಣಿ ಇಟ್ಟಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿತ್ತು.


kadabatimes.in


ಮೊದಲೇ ಹಸಿ ಮೀನು ವ್ಯವಹಾರಕ್ಕೆ ಗ್ರಾಮ ಪಂಚಾಯತ್ ಮೌಲ್ಯ 1 ಲಕ್ಷ
ಎಂದು ಘೋಷಿಸಲಾಗಿದ್ದ ಕಾರಣ ಒಂದು ಲಕ್ಷದಿಂದ ಆರಂಭವಾದ ಬಿಡ್ಡಿಂಗ್ ಕಳೆದ ಬಾರಿಯ ಬಿಡ್ಡಿಂಗ್ ಮೊತ್ತವನ್ನೂ ಮೀರಿ ಬೆಳೆದು 3.37 ಲಕ್ಷ ಮೊತ್ತಕ್ಕೆ ಮುಹಮ್ಮದ್ ಶರೀಫ್ ಅಲಿಯಾಸ್ ಮಮ್ಮು ಅವರ ಪಾಲಾಗಿದೆ. ಈ ಸುದ್ದಿಯಿಂದ ಸಾರ್ವಜನಿಕರನ್ನು
ಹೌಹಾರುವಂತೆ ಮಾಡಿದೆ.


kadabatimes.in

ಇನ್ನು
ಹರಾಜು
ಮುಗಿದ ಬೆನ್ನಲ್ಲೇ ಗ್ರಾಮಸ್ಥರು ವ್ಯವಹಾರ ಲೆಕ್ಕಾಚಾರ ಆರಂಭಿಸಿದ್ದು, ನೂಜಿಬಾಳ್ತಿಲ ವ್ಯಾಪ್ತಿಯಲ್ಲಿ ಮೀನಿನ ದರ ಏರುವ ಬಗ್ಗೆ
ಚರ್ಚಿಸತೊಡಗಿದ್ದಾರೆ. ದಿನವೊಂದಕ್ಕೆ
ಸರಾಸರಿ ಒಂದು ಸಾವಿರ ರೂಪಾಯಿ ಗ್ರಾಮ ಪಂಚಾಯತ್ ಗೆ ಕೊಡಬೇಕಾದರೆ ಮೀನಿನ
ಬೆಲೆ ಇನ್ನೆಷ್ಟು ಹೆಚ್ಚಾಗಬದೆಂಬ ಲೆಕ್ಕಾಚಾರ ಜನರದ್ದಾಗಿದೆ.