25.4 C
Kadaba
Wednesday, April 23, 2025

ಹೊಸ ಸುದ್ದಿಗಳು

Public Toilet-ಸಮರ್ಪಕ ನಿರ್ವಹಣೆ ಇಲ್ಲದ ನೆಲ್ಯಾಡಿ ಪೇಟೆಯ ಸಾರ್ವಜನಿಕ ಶೌಚಾಲಯ

ನೆಲ್ಯಾಡಿಯಲ್ಲಿ ಸುಮಾರು 250ರಿಂದ 300ರಷ್ಟು ವ್ಯಾಪಾರ ಮಳಿಗೆಗಳಿವೆ. ನೆಲ್ಯಾಡಿ, ಕೌಕ್ರಾಡಿ ಗ್ರಾಮಗಳನ್ನು ಬೆಸೆಯುವ ಹಾಗೂ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು – ಮಂಗಳೂರಿನ ಮಧ್ಯೆ ಬರುವುದರಿಂದ ಈ ಪ್ರದೇಶದಲ್ಲಿ ಸುಸಜ್ಜಿತವಾದ ಶೌಚಾಲಯ ಅತೀ ಅಗತ್ಯವಾಗಿದೆ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಕ್ಷೇಪಾರ್ಹ, ಅಥವಾ ತಪ್ಪು ಮಾಹಿತಿಗಳು  ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್ (KADABA TIMES):ನೆಲ್ಯಾಡಿ ಪಟ್ಟಣದ ಮುಖ್ಯ ವಾಣಿಜ್ಯ ಕೇಂದ್ರದಲ್ಲಿರುವ ಸಾರ್ವಜನಿಕ ಶೌಚಾಲಯ ಈಗ ಪೂರ್ತಿಯಾಗಿ ಹಾಳಾಗಿದ್ದು, ಸಾರ್ವ ಜನಿಕರಿಗೆ ಇದರಿಂದ ತುಂಬಾ ತೊಂದರೆಯಾಗಿದೆ.  ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಹಾಗೂ ಸರಿಯಾದ ನಿರ್ವಹಣೆ ಕೊರತೆಯಿಂದ ಈ  ಶೌಚಾಲಯವು ಬಳಸಲು ಅಯೋಗ್ಯವಾಗಿದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

kadabatimes.in

ಪ್ರವೇಶ ದ್ವಾರಗಳು, ಶೌಚಾಲಯದ ಬಾಗಿಲುಗಳು ಮುರಿದು ಹೋಗಿವೆ, ಕಿಟಕಿಗಳು ಇಲ್ಲ, ಗೋಡೆಗಳು ಬಿರುಕು ಬಿಟ್ಟಿವೆ, ಒಳಗೆ ನೀರು ಸರಿಯಾಗಿ ಹರಿಯುತ್ತಿಲ್ಲ, ರಾತ್ರಿ ವೇಳೆಯಲ್ಲಿ ವಿದ್ಯುತ್‌ ಸಂಪರ್ಕವಿಲ್ಲ ಹಾಗೂ ಸುತ್ತಮುತ್ತು ದುರ್ವಾಸನೆಯ ಕಾರಣ ಜನರು ಬಳಕೆ ಮಾಡಲು ಹಿಂಜರಿಯುತ್ತಿದ್ದಾರೆ. ಇದರಿಂದ ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸಾರ್ವಜನಿಕ ಶೌಚಾಲಯವನ್ನು  ಹಲವು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದ್ದು, ಕಾಲಕ್ರಮೇಣ ಈ ದುಸ್ಥಿತಿಗೆ  ತಲುಪಿದೆ.

kadabatimes.in
kadabatimes.in

ನೆಲ್ಯಾಡಿಯಲ್ಲಿ ಸುಮಾರು 250ರಿಂದ 300ರಷ್ಟು ವ್ಯಾಪಾರ ಮಳಿಗೆಗಳಿವೆ. ನೆಲ್ಯಾಡಿ, ಕೌಕ್ರಾಡಿ ಗ್ರಾಮಗಳನ್ನು ಬೆಸೆಯುವ ಹಾಗೂ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು – ಮಂಗಳೂರಿನ ಮಧ್ಯೆ ಬರುವುದರಿಂದ ಈ ಪ್ರದೇಶದಲ್ಲಿ ಸುಸಜ್ಜಿತವಾದ ಶೌಚಾಲಯ ಅತೀ ಅಗತ್ಯವಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತವು ಗಮನಹರಿಸಬೇಕಾಗಿದೆ.

kadabatimes.in

ಈ ಶೌಚಾಲಯ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಊರಿನ ನಾಗರಿಕರು ಸ್ಥಳೀಯ ಆಡಳಿತದ ವಿರುದ್ದ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಲ್ಲದೆ ಮಹಿಳೆಯರು ಹಾಗೂ ಹಿರಿಯರು ಶೌಚಾಲಯ ಸೌಲಭ್ಯಗಳಿಲ್ಲದೇ ನರಕಯಾತನೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯವನ್ನು ಸಂಪೂ ರ್ಣವಾಗಿ ನವೀಕರಿಸಿದ ಆಧುನಿಕ ಸೌಲಭ್ಯ ಗಳೊಂದಿಗೆ ಸಾರ್ವಜನಿಕರಿಗೆ ಒದಗಿಸಬೇಕು ಎಂದು ಜನಸಾಮಾನ್ಯರ ಆಗ್ರಹವಾಗಿದೆ.

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.