ಕಡಬ:
ಪೆರಾಬೆ ಗ್ರಾ.ಪಂ ವ್ಯಾಪ್ತಿಯ ಕುಂತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ
ಕಾಮಗಾರಿ
ವೇಳೆ ಶಾಲಾ ಕಟ್ಟಡ ಕುಸಿತಗೊಂಡು ನಾಲ್ವರು
ಮಕ್ಕಳು ಗಾಯಗೊಂಡಿರುವ ಘಟನೆ ಆ.27ರಂದು ಮಧ್ಯಾಹ್ನ ನಡೆದಿತ್ತು. ಗಾಯಗೊಂಡ ಮಕ್ಕಳನ್ನು
ಪುತ್ತೂರು ಆಸ್ಪತ್ರೆಗೆ ದಾಖಲಾಗಿದೆ.




ಘಟನೆಯ
ಮಾಹಿತಿ ತಿಳಿದು ಸ್ಥಳಕ್ಕೆ ಅಧಿಕಾರಿಗಳು, ಸ್ಥಳೀಯರು, ಮಕ್ಕಳ ಪೋಷಕರು ಆಗಮಿಸಿದ್ದರು.ಈ ಸಂದರ್ಭ ಶಾಲಾಭಿವೃದ್ದಿ
ಸಮಿತಿಯ ಅಧ್ಯಕ್ಷರು ಘಟನೆ ನಡೆದ ಸಂದರ್ಭದಲ್ಲಿ ಶಾಲೆ ನಡೆಯುತ್ತಿರಲಿಲ್ಲ ಎಂಬ ಮಾತಿಗೆ ಸೇರಿದ್ದವರು ರೊಚ್ಚಿಗೆದ್ದ ಪ್ರಸಂಗ ಎದುರಾಯಿತು.


ಸ್ಥಳಕ್ಕೆ
ಸಹಾಯಕ ಆಯುಕ್ತರು ಅಥವಾ ಜಿಲ್ಲಾಧಿಕಾರಿ ಬರಬೇಕೆಂದು ಸೇರಿದ್ದ ಜನರು ಪಟ್ಟು ಹಿಡಿದರು. ಸ್ಥಳದಲ್ಲಿ ಕಡಬ ತಹಶೀಲ್ದಾರ್,ಬಿಇಒ,
ಡಿವೈಎಸ್ಪಿ,ಕಡಬ ಠಾಣಾ ಎಸ್.ಐ ಸಹಿತ ಹಲವು ಅಧಿಕಾರಿಗಳು ಆಗಮಿಸಿದ್ದಾರೆ.


ಮಾದ್ಯಮ ಮಿತ್ರರ ಮಾಹಿತಿ ಪ್ರಕಾರ ಪುತ್ತೂರು ಸಹಾಯಕ ಆಯುಕ್ತರು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.