36.4 C
Kadaba
Sunday, March 16, 2025

ಹೊಸ ಸುದ್ದಿಗಳು

ಕಡಬ: ಮನೆಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ಸ್ಕಿಡ್: ಗೂಡಂಗಡಿ ವ್ಯಾಪಾರಿ ಮೃತ್ಯು

Must read

 ಕಡಬ:ತನ್ನ ಗೂಡಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ  ಸ್ಕೂಟರ್ ಸ್ಕಿಡ್ ಆಗಿ ಬಿದ್ದು  ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೋಡಿಂಬಾಳ ದಿಂದ ವರದಿಯಾಗಿದೆ.

kadabatimes.in

kadabatimes.in

ಕೋಡಿಂಬಾಳ ಗ್ರಾಮದ ಬೆದ್ರಾಜೆ ಎಂಬಲ್ಲಿ ಈ ಘಟನೆ ನಡೆದಿದ್ದು   ಕೋಡಿಂಬಾಳ ನಿವಾಸಿ ಚೋಮ(40) ಮೃತಪಟ್ಟವರು.

 ಕಡಬ ಪೇಟೆಯಲ್ಲಿ ಗೂಡಂಗಡಿ ವ್ಯಾಪಾರ ಮಾಡುತ್ತಿದ್ದ ಚೋಮರವರು  ಮಂಗಳವಾರ  ರಾತ್ರಿ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿದೆ.

kadabatimes.in

ರಸ್ತೆಗೆ ಬಿದ್ದು ಗಾಯಗೊಂಡಿದ್ದ ಅವರನ್ನು   ಸ್ಥಳೀಯರ ಸಹಾಯದಿಂದ ಕಡಬ ಸಮುದಾಯ ಆಸ್ಪತ್ರೆ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಪರೀಕ್ಷಿಸಿದ ವೈದ್ಯರು ಚೋಮರವರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. 

ಈ ಕುರಿತು ಶೀನಪ್ಪ ಎಂಬವರು ನೀಡಿದ ದೂರಿನಂತೆ  ಕಡಬ ಠಾಣೆಯಲ್ಲಿ ಅ.ಕ್ರ :85/2024.ಕಲಂ: 281,106 BNS-2023 ರಂತೆ ಪ್ರಕರಣ ದಾಖಲಾಗಿದೆ.

kadabatimes.in