39.8 C
Kadaba
Sunday, March 16, 2025

ಹೊಸ ಸುದ್ದಿಗಳು

ಸವಣೂರಿನ ಪುಣ್ಚಪ್ಪಾಡಿಯಲ್ಲಿ 1843ನೇ ಮದ್ಯವರ್ಜನಾ ಶಿಬಿರ : ಪ್ರಯೋಜನ ಪಡೆದುಕೊಂಡವರೆಷ್ಟು?

Must read

ಕಡಬ ಟೈಮ್, ಸವಣೂರು
:
 ಇಲ್ಲಿನ
ಪುಣ್ಚಪ್ಪಾಡಿ
ನೇರೋಳ್ತಡ್ಕ
ವಿನಾಯಕ ನಗರ  ಶ್ರೀ
ಗೌರಿ ಸದನ ಸಭಾಂಗಣದಲ್ಲಿ ಶ್ರೀ ಕ್ಷೇತ್ರ  ಧರ್ಮಸ್ಥಳ
ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್
ಕಡಬ ಇದರ ಮುಂದಾಳತ್ವದಲ್ಲಿ ಆ
.22 ರಿಂದ
.29ರವರೆಗೆ   1843 ನೇ ಮದ್ಯವರ್ಜನ ಶಿಬಿರ
ನಡೆದಿದ್ದು  ಆ
.29ರಂದು ಸಮಾರೋಪ ಸಮಾರಂಭ ನಡೆದಿದೆ.

kadabatimes.in

 ಶ್ರೀ
ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ   ಡಾ|ಡಿ.ವೀರೇಂದ್ರ
ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವಿವಿಧ ಸಮಿತಿ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ
ನಡೆದ ಎಂಟು ದಿನಗಳ  ಈ ಶಿಬಿರದಲ್ಲಿ ಸುಮಾರು
77
ಮಂದಿ ಶಿಬಿರಾರ್ಥಿಗಳು ಭಾಗವಹಿಸಿದರು.

kadabatimes.in

ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭ


ಸಮಾರೋಪ
ಸಮಾರಂಭದಲ್ಲಿ ಭಾಗವಹಿಸಿದ ಜಾರಿ
ನಿರ್ದೇಶನಾಲಯದ
ವಿಶೇಷ ಸರಕಾರಿ ಅಭಿಯೋಜಕರಾದ ಮಹೇಶ್ ಕಜೆ ಮಾತನಾಡಿ, ಮದ್ಯ ವ್ಯಸನದ ವಿರುದ್ಧ ಶಿಬಿರದ ಮೂಲಕ ಹೋರಾಟ ಮಾಡುವ ಶಿಬಿರಾರ್ಥಿಗಳು ಕೂಡ ಯೋಧರಂತೆ.ಒಬ್ಬ ವ್ಯಕ್ತಿಯ ಕುಡಿತ ಒಂದು ಕುಟುಂಬವನ್ನು ಪಡೆದರೆ ಅದೇ ಕುಡಿತದ ಚಟ ಬಿಟ್ಟಾಗ ಕುಟುಂಬವನ್ನು
ಬೆಸೆಯುತ್ತದೆ ಎಂದರು.


kadabatimes.in

ಅಖಿಲ
ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಪದ್ಮನಾಭ
ಶೆಟ್ಟಿ ಮಾತನಾಡಿ, ಮದ್ಯವರ್ಜನಾ ಶಿಬಿರದ ಆಯೋಜನೆ ಎಂದರೆ ಅದೊಂದು ಭಿನ್ನ ವ್ಯವಸ್ಥೆ. ಒಬ್ಬ ವ್ಯಕ್ತಿಯ ಹೊಸ ಜೀವನ ರೂಪಿಸುವ ಪುಣ್ಯಕಾರ್ಯಎಂದರು.  ರಾಜ್ಯ ಮದ್ಯಪಾನ
ಸಂಯಮ ಮಂಡಳಿಯ ಮಾಜಿ ನಿರ್ದೇಶಕ ಭಾಸ್ಕರ ಕೋಡಿಂಬಾಳ,  ಸವಣೂರು
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಶುಭಹಾರೈಸಿದರು.


ಅಧ್ಯಕ್ಷತೆ
ವಹಿಸಿದ್ದ ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸಚಿನ್ ಕುಮಾರ್ ಜೈನ್  ಮಾತನಾಡಿ,ಮದ್ಯವರ್ಜನಾ ಶಿಬಿರವೆಂದರೆ ಅದೊಂದು ಮನಕರಗುವ ಶಿಬಿರ. ಇಲ್ಲಿ ಎಲ್ಲರ ಪ್ರೀತಿದೊರಕಿದೆ. ಶಿಬಿರದ ಪ್ರಯೋಜನ ಪಡೆದುಕೊಂಡವರು ಜೀವನದಲ್ಲಿ ಯಶಸ್ವಿಯಾಗಬೇಕು.ಸಮಾಜವು ಋಣಾತ್ಮಕ ಗುಣಗಳನ್ನು ಗುರುತಿಸುವ ಬದಲು ಸಕಾರತ್ಮ ಗುಣಗಳನ್ನು ಗುರುತಿಸುವ ಕೆಲಸ ಮಾಡಬೇಕು ಎಂದರು.ವೇದಿಕೆಯಲ್ಲಿ ಶ್ರೀ ಕ್ಷೇತ್ರ .ಗ್ರಾ.ಯೋ.ಯ ಪ್ರಮುಖರು, ಸ್ಥಳೀಯ ಮುಂದಾಳುಗಳು ಉಪಸ್ಥಿತರಿದ್ದರು.

kadabatimes.in