39.8 C
Kadaba
Sunday, March 16, 2025

ಹೊಸ ಸುದ್ದಿಗಳು

ಸುಬ್ರಹ್ಮಣ್ಯ ಯುವತಿ ಏರ್ ಪೋರ್ಟ್ ನಿಂದ ನಾಪತ್ತೆ ಪ್ರಕರಣ :ಪತ್ತೆ ಹಚ್ಚಿದ ಪೊಲೀಸರು

Must read

ಕಡಬ ಟೈಮ್ಸ್, ಸುಬ್ರಹ್ಮಣ್ಯ: ಕೊಲ್ಲಮೊಗ್ರ ಗ್ರಾಮದ  ಯುವತಿಯೋರ್ವಳು ಶುಕ್ರವಾರ  ನಾಪತ್ತೆಯಾದ ಘಟನೆ ವರದಿಯಾದ ಬೆನ್ನಲ್ಲೇ ಪ್ರಕರಣವನ್ನು ಫೋಲೀಸರು ಭೇದಿಸಿದ್ದಾರೆ.
BANGALURU AIRPORT

kadabatimes.in
kadabatimes.in
kadabatimes.in
 
ಬೆಂಗಳೂರಿನ ಏರ್ ಪೋರ್ಟ್ ನಿಂದ ಯುವತಿ ನಾಪತ್ತೆಯಾದ ಬಗ್ಗೆ ಮನೆಯವರು ಪೋಲೀಸರಿಗೆ ದೂರು ನೀಡಿದ್ದರು. ಪ್ರಕರಣ ಭೇದಿಸಿದ ಪೋಲೀಸರಿಗೆ ಮಾಡಾವು ಮೂಲದ ಯುವಕನೋರ್ವನ ಕೈವಾಡ ಬೆಳಕಿಗೆ ಬಂದಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಯುವತಿ ನಾಪತ್ತೆ ವಿಚಾರ ಗಮನಕ್ಕೆ ಬರುತ್ತಿದ್ದಂತೆ ನಾಪತ್ತೆಯಾದ ಯುವತಿ ತನ್ನ ಅಕ್ಕನ ಮನೆಯಿಂದ ನಾಪತ್ತೆಯಾದ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಠಾಣೆಗೆ ಮಾಹಿತಿ ನೀಡಲಾಗಿತ್ತು.ಅಲ್ಲಿ ಪತ್ತೆ ಹಚ್ಚಲಾಗಿದೆ.
 ದೂರುಗಳು ಬಂದಾಗ ನಾವು ಸ್ವೀಕರಿಸದೇ ಕಳಿಸಿಲ್ಲ ಮತ್ತು ಯುವತಿ ನಾಪತ್ತೆಯ ವಿಚಾರಕ್ಕೆ ಬೇಕಾದ ಕಾನೂನು ರೀತಿಯ ಸೂಚನೆಗಳನ್ನು ಮತ್ತು ಕ್ರಮಗಳನ್ನು ಕೈಗೊಂಡಿದ್ದೆವೆ  ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಮಾಹಿತಿ ನೀಡಿದ್ದಾರೆ  .