ಕಡಬ ಟೈಮ್: ಯುವತಿಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ ಆರೋಪದಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಮೂಡಬಿದಿರೆ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ.






ಇರುವೈಲಿನ ಅರ್ಷದ್ ಎಂಬಾತ
ಬಂಧಿತ ಯುವಕ. ಆ.29ರಂದು ಸಂಜೆ ಯುವತಿಯು
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಹಪಾಠಿಯಾಗಿದ್ದ ಈತ ಯುವತಿಯನ್ನು
ಅಡ್ಡಗಟ್ಟಿ ನೀನು ನನ್ನನ್ನು ಯಾಕೆ ಪ್ರೀತಿಸುತ್ತಿಲ್ಲ ಎಂದು ಹೇಳಿದ್ದಲ್ಲದೇ ನನ್ನ ಮೇಲೆ ಕೈ ಹಾಕಲು ಬಂದಿರುವುದಾಗಿ
ದೂರಿನಲ್ಲಿ ತಿಳಿಸಲಾಗಿದೆ.


ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದೂರು ನೀಡಿರುವ ಯುವತಿ ಈ ಹಿಂದ ಬ್ಯೂಟಿಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದು ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು ಎನ್ನಲಾಗಿದೆ. ಬಟ್ಟೆ ಹೊಲಿಸಲೆಂದು ಟೈಲರ್ ಬಳಿ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.