32 C
Kadaba
Sunday, March 16, 2025

ಹೊಸ ಸುದ್ದಿಗಳು

ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿ: ಕಂದ್ರಪ್ಪಾಡಿಯಲ್ಲಿ ನಡೆದ ಎರಡು ದಿನಗಳ ಭರ್ಜರಿ ಕೋಳಿ ಅಂಕ

Must read

ಕಡಬ ಟೈಮ್ಸ್ ಸುಬ್ರಹ್ಮಣ್ಯ: ಕೋಳಿ ಅಂಕದ ಹೆಸರಲ್ಲಿ ಜೂಜಾಟ ಅವ್ಯಾಹತವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ  ನಿಷೇಧ
 ಹೇರಿ
ರಾಜ್ಯ ಪೊಲೀಸ್ ಮಹಾನಿರ್ದೇಶಕರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದ.ಕ
ಪೊಲೀಸ್ ಇಲಾಖೆಯೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

kadabatimes.in

kadabatimes.in
ಸಾಂಧರ್ಭಿಕ ಚಿತ್ರ


ಆದರೆ ಇದೀಗ
 ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕಂದ್ರಪ್ಪಾಡಿಯಲ್ಲಿ ಆ. 31 ಶನಿವಾರ ಮತ್ತು ಸೆ.1 ರಂದು ಅದ್ದೂರಿಯಾಗಿ  ಕೋಳಿ ಅಂಕ ನಡೆದಿದೆ. ಕೋಳಿ ಅಂಕ ನಡೆಯುವ ಸ್ಥಳದಲ್ಲಿ ಸೀಟು ಹಾಕಿ ವ್ಯವಸ್ಥಿತ ವಾಗಿ ಆಯೋಜನೆ ಮಾಡಿರುವುದಾಗಿ ವರದಿಯಾಗಿದೆ.

kadabatimes.in

ಕೋಳಿ
ಅಂಕ ನಡೆಸುವ  ಸಲುವಾಗಿ ತಂಡವೊಂದು ಮೇಲಾಧಿಕಾರಿಗಳ ಬಳಿ ವಿನಂತಿಸಿಕೊಂಡಿದ್ದರೂ  ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಶುಕ್ರವಾರದಂದೇ ಕೋಳಿ ಅಂಕ ನಡೆಸಲು ಸಕಲ ಸಿದ್ದತೆಗಳನ್ನು
ಮಾಡಿದ್ದರು.

ಹೈ ಸೆಕ್ಯೂರಿಟಿ: ದಾಳಿಯಾಗುವುದನ್ನು ತಪ್ಪಿಸಲು ,ಪೊಲೀಸರು ಬರುವಾಗಲೇ ಮಾಹಿತಿ ನೀಡಲು ಗಲ್ಲಿಗಳಲ್ಲಿ  ಪ್ರತ್ಯೇಕ ಯುವಕರ ತಂಡವನ್ನು ನಿಯೋಜಿಸಿ ಕೋಳಿ ಅಂಕ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

 ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಪಡೆದ
ಎಸ್.ಐ  ನೇತೃತ್ವದ ಪೊಲೀಸರು ದಾಳಿಗೆ ಮುಂದಾದ ವೇಳೆ ಸ್ಥಗಿತಗೊಳಿಸಿ ಪರಾರಿಯಾಗಿರುವುದಾಗಿ ಮಾಹಿತಿ ಲಭಿಸಿದೆ.ಹೆಚ್ಚಿನ ವಿವರ ಲಭಿಸಿಲ್ಲ.

kadabatimes.in

ಕೋಳಿ
ಅಂಕವು ಪ್ರಾಣಿ ಹಿಂಸೆ ತಡೆ ಕಾಯಿದೆ 1960 ಕಲಂ 11 ಪ್ರಕಾರ, ಅಪರಾಧ.
ಕಾಯಿದೆಯನ್ನು ಎಲ್ಲ ಠಾಣೆಗಳ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.ಆದರೆ ಇವೆಲ್ಲವನ್ನೂ ಮೀರಿ ಕೋಳಿ ಅಂಕ ಯಾರ ಸಹಕಾರದಲ್ಲಿ ನಡೆದಿದೆ ಎಂಬ ಸಂಶಯ  ಸಾರ್ವಜನಿಕರಲ್ಲಿ ಮೂಡಿದೆ.