
ಕಡಬ/ಸುಳ್ಯ: ಕೆಂಪು ಕೇಪುಲಾಜೆ ನಿಡ್ಪಳ್ಳಿ ನಾಗಬ್ರಹ್ಮ ಮೂಲಕ್ಷೇತ್ರ ಮತ್ತು ಮೊಗೇರ್ಕಳ ದೈವಸ್ಥಾನ ನಿರ್ಮಾಣಕ್ಕೆ ಸುಳ್ಯದ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ಧಮಠದ ಶ್ರೀ ರಾಜೇಶನಾಥಜೀ ಸ್ವಾಮೀಜಿಯವರು ಧನ ಸಹಾಯ ನೀಡಿದ್ದಾರೆ.


ಅನ್ನಪೂರ್ಣೇಶ್ವರಿ ಮಠದಲ್ಲಿ ನವರಾತ್ರಿ ಪೂಜಾ ಸಂದರ್ಭ ಆದಿ ನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಸದಸ್ಯರು ಸ್ವಾಮೀಜಿಗಳನ್ನು ಭೇಟಿ ಮಾಡಿ ನಾಗಬ್ರಹ್ಮ ಮೂಲಕ್ಷೇತ್ರ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಸ್ವಾಮೀಜಿಯವರು ಮೊಗೇರರ ಮೂಲ ಕ್ಷೇತ್ರ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿ ,ಧನ ಸಹಾಯ ನೀಡಿದಲ್ಲದೆ ಅಬಿವೃದ್ದಿಗಾಗಿ ಇನ್ನಷ್ಟು ಸಹಕಾರ ನೀಡುವುದಾಗಿ ತಿಳಿಸಿದರು.


ಸ್ವಾಮೀಜಿಯವರ ನೆರವಿನಿಂದ ಮಡಿಕೇರಿ ಭಾಗದಲ್ಲಿ ಹಲವಾರು ದೇವಸ್ಥಾನಗಳು, ದೈವಸ್ಥಾನ ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ತಮ್ಮ ಜನಪರ ಕೆಲಸಗಳಿಂದ ಸ್ವಾಮೀಜಿಯವರು ಈಗಾಗಲೇ ಸುಳ್ಯ , ಮಡಿಕೇರಿ, ಕುಶಾಲನಗರ ವಿವಿಧ ಭಾಗದಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿದ್ದಾರೆ. ಶ್ರೀ ಸಿದ್ದಮಠದ ಮೂಲ ಶಾಖೆಯು ಮರ್ಕಂಜ ದೇಶಕೋಡಿ ಯಲ್ಲಿ ನಿರ್ಮಾಣವಾಗುತ್ತಿದೆ. ದ್ದು
ಸ್ವಾಮಿಜೀಯವರನ್ನು ಭೇಟಿ ಮಾಡಿದ ಸಂದರ್ಭ ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ನ ಕಾರ್ಯಧ್ಯಕ್ಷ ಕರುಣಾಕರ ಪಲ್ಲತಡ್ಕ, ಕಾರ್ಯದರ್ಶಿ ಬಾಲಕೃಷ್ಣ ಕೇಪುಳು, ಜೊತೆ ಕಾರ್ಯದರ್ಶಿ ಸಂದೀಪ್ ಪಾಂಜೋಡಿ, ಸುಳ್ಯ ಯುವ ವೇದಿಕೆ ಗೌರವ ಅಧ್ಯಕ್ಷ ಪ್ರಕಾಶ್ ಪಾತೆಟ್ಟಿ, ವಿಶ್ವನಾಥ್ ಮರ್ಕಂಜ, ಅಣ್ಣು ಮರ್ಕಂಜ, ವಿಜಯಾ ವಿಶ್ವನಾಥ್ ಮರ್ಕಂಜ, ಅಭಿಲಾಷ್, ವಿಶ್ವಾಸ್ ಮುಂತಾದವರು ಉಪಸ್ಥಿತರಿದ್ದರು.
