ಕಡಬ ಟೈಮ್: ಉಡ
ವೇಗವಾಗಿ ಓಡುವ ಶಕ್ತಿಯನ್ನು ಹೊಂದಿದೆ ,ಆದ್ರೆ ಲಾನ್ ಹಗ್ಗ ಕುತ್ತಿಗೆಗೆ ಬಿಗಿದು ಒಡ್ಡಾಡುತ್ತಾ ಪ್ರಾಣಾಪಾಯದಲ್ಲಿದ್ದ
ಉಡವೊಂದನ್ನು ಪುತ್ತೂರಿನ ಖ್ಯಾತ ಉರಗತಜ್ಞ ಡಾ. ರವೀಂದ್ರನಾಥ್
ಐತಾಳ ರಕ್ಷಿಸಿದ್ದಾರೆ.




ಪುತ್ತೂರು
ನಗರದ ಸೂತ್ರಬೆಟ್ಟುವಿನಲ್ಲಿ ಯಾರೋ ಇಟ್ಟ ನೈಲಾನ್ ಹಗ್ಗದ ಉರುಳಿಗೆ ಉಡ ಸಿಕ್ಕಿಬಿದ್ದಿದೆ. ಅದು ಹೇಗೋ
ಅಲ್ಲಿಂದ ತಪ್ಪಿಸಿಕೊಂಡರೂ, ಕುತ್ತಿಗೆಯಲ್ಲಿ ಹಗ್ಗ ಬಿಗಿದುಕೊಂಡಿತ್ತು. ಉಸಿರಾಡಲು ಕಷ್ಟಪಡುತ್ತಿದ್ದ
ಉಡವನ್ನು ಕಂಡ ಸ್ಥಳೀಯರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.


ಸರಿಯಾದ
ಸಮಯಕ್ಕೆ ಸ್ಥಳಕ್ಕೆ ಬಂದ ಐತಾಳರು ಉರುಳಿನಿಂದ ಉಡಕ್ಕೆ ಮುಕ್ತಿ ನೀಡಿ ಉಡ ಸ್ವತಂತ್ರ್ಯವಾಗಿ ಬಿಡಲಾಯಿತು.


ಹಲ್ಲಿಯ
ಉಪಗಣಕ್ಕೆ, ವೆರಾನಸ್ ವಂಶಕ್ಕೆ ಸೇರುವ ಸರೀಸೃಪ ಇದಾದಿದೆ . ಇಂಗ್ಲಿಷ್‌ನಲ್ಲಿ ಇದಕ್ಕೆ ommon
indian monitor ಎಂದು ಕರೆಯುತ್ತಾರೆ. ಮರ ಮತ್ತು ನೆಲದ ಬಿಲಗಳಲ್ಲಿ ಇದರ ವಾಸ. ಸಾಮಾನ್ಯವಾಗಿ
61ರಿಂದ 175 ಸೆಂಟಿಮೀಟರ್ ಉದ್ದವಿದ್ದು, ಸುಮಾರು 7.2 ಕಿ.ಗ್ರಾಂ. ತೂಗುತ್ತದೆ. ಉಡ ವೇಗವಾಗಿ ಓಡುವ
ಶಕ್ತಿಯನ್ನು ಹೊಂದಿದೆ. ಕೋಪಗೊಂಡಾಗ, ಶತ್ರುಗಳೊಂದಿಗೆ
ಕಾದಾಡುವಾಗ ಆವೇಶದಿಂದ ಬಾಲವನ್ನು ಬಡಿಯುತ್ತಾ, ನಾಲಿಗೆಯನ್ನು
ಹೊರಚಾಚಿ ಹಾವುಗಳಂತೆ ಬುಸುಗುಡುತ್ತದೆ. ಇದರ ಕೊಬ್ಬಿನಿಂದ ಉಡದ ತುಪ್ಪ ತಯಾರಿಸಿ ವಾತ ರೋಗಿಗಳಿಗೆ
ಕೊಡುತ್ತಾರೆ.