ಕಡಬ
ಟೈಮ್ಸ್ , ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿದ
ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಕಜೆ ಎಂಬಲ್ಲಿ ಶುಕ್ರವಾರ ನಡೆದಿದೆ.




![]() ![]() |
ಅಪಘಾತಗೊಂಡ ದ್ವಿಚಕ್ರವಾಹನಗಳು |


ಜಯಂತ ಪೂಜಾರಿ
ಮತ್ತು ದಿನೇಶ್ ಬುಡೇರಿ ಗಾಯಗೊಂಡವರು. ಆಕ್ಟಿವಾ ಸ್ಕೂಟಿ ಹಾಗೂ
ಪಲ್ಸರ್ ಬೈಕ್ ನಡುವೆ ಅಪಘಾತವಾಗಿದ್ದು ಢಿಕ್ಕಿಯ
ರಭಸಕ್ಕೆ ಸವಾರರಿಬ್ಬರು ರಸ್ತೆಗೆಸೆಯಲ್ಪಟ್ಟಿದ್ದಾರೆ.


ಪರಿಣಾಮ
ಆಕ್ಟಿವಾ ಸವಾರನ ತಲೆಗೆ ಗಾಯವಾದರೆ ಬೈಕ್
ಸವಾರನ ಕಾಲಿಗೆ
ಗಾಯವಾಗಿರುವುದಾಗಿ ತಿಳಿದು ಬಂದಿದೆ.
ಇಬ್ಬರನ್ನೂ ಆಂಬ್ಯುಲೆನ್ಸ್
ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿರುವುದಾಗಿ ತಿಳಿದುಬಂದಿದೆ.