

![]() ![]() |
ಗುರು ಪ್ರಸಾದ್ ಕುಂಚಡ್ಕ |


ಸುಳ್ಯ: ಸುಳ್ಯ-
ತೊಡಿಕಾನ ಖಾಸಗಿ ಅವಿನಾಶ್ ಬಸ್ ನಲ್ಲಿ ಕಂಡಕ್ಟರ್ ಆಗಿ ದುಡಿಯುತ್ತಿದ್ದ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸೋಮವಾರ(ಅ.14) ವರದಿಯಾಗಿದೆ.
ಆಲೆಟ್ಟಿ
ಗ್ರಾಮದ ಕುಂಚಡ್ಕ ನಿವಾಸಿ ನಾರಾಯಣ ಬೆಳ್ಚಪ್ಪಾಡ ರವರ ಪುತ್ರ ಅವಿನಾಶ್ ಗುರುಪ್ರಸಾದ್
ಕುಂಚಡ್ಕ ರವರು (32 ವರ್ಷ) ಮೃತಪಟ್ಟವರು.
ಬಸ್
ಕಂಡಕ್ಟರ್ ಆಗಿದ್ದ ಅವರು ಸುಳ್ಯದಿಂದ ತೊಡಿಕಾನಕ್ಕೆ ಬಸ್ಸಿನಲ್ಲಿ ಹೋಗುತ್ತಿರುವ ವೇಳೆಯಲ್ಲಿ ಅಡ್ಯಡ್ಕ ತಲುಪುತ್ತಿದ್ದಂತೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಬಸ್ಸು ಚಾಲಕರು ಹಾಗೂ ಸ್ಥಳೀಯರು ಸೇರಿ ಅಟೋ ರಿಕ್ಷಾದಲ್ಲಿ ಸುಳ್ಯಕ್ಕೆ ಕರೆ ತರಲಾಯಿತು. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಹೃದಯಾಘಾತಕ್ಕೊಳಪಟ್ಟು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.


ಮೃತರು
ತಾಯಿ, ಪತ್ನಿ ಹಾಗೂ 3 ವರ್ಷದ ಗಂಡು ಮಗು ಮತ್ತು ಸಹೋದರರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

