

![]() ![]() |
ಒಕ್ಕೂಟದ ಪಧಾದಿಕಾರಿಗಳ ಸಮಾವೇಶ ಕಾರ್ಯಕ್ರಮ |


ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಒಕ್ಕೂಟದ ಪಧಾದಿಕಾರಿಗಳ ಸಮಾವೇಶ ಕಾರ್ಯಕ್ರಮವು ಇತ್ತೀಚೆಗೆ ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉಧ್ಘಾಟಿಸಿದ ಯೋಜನೆಯ ಉಡುಪಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ಧೇಶಕ ದುಗ್ಗೇಗೌಡ ರವರು ಮಾತನಾಡಿ, ಯೋಜನೆಯು ಕಾನೂನು ಬದ್ದವಾಗಿ ಬ್ಶಾಂಕ್ ನ ಸಹಭಾಗಿತ್ವದಲ್ಲಿ ಅಭಿವೃದ್ಧಿ
ಕೆಲಸಗಳನ್ನು ಮಾಡುತ್ತಿದ್ದು ವ್ಶವಹಾರಿಕವಾಗಿ ಗೊಂದಲಗಳು ಬೇಡ,ಸ್ವಸಹಾಯ ಸಂಘಗಳ ಆರ್ಥಿಕ ನಿರ್ವಹಣೆಯು ಬ್ಶಾಂಕ್ ನ ನಿಯಮಗಳಿಗೆ ಬದ್ದವಾಗಿಯೇ
ನಡೆಯುತ್ತದೆ ಎಂದರು.ಅಲ್ಲದೆ ಸೇವಾ ಮನೊಭಾವನೆಯಿಂದ ಒಕ್ಕೂಟದ ವ್ಶಾಪ್ತಿಯಲ್ಲಿ ಸಮರ್ಪಕವಾಗಿ ಅನುಷ್ಟಾನಿಸಿರುವುದು ಶ್ಲಾಘನೀಯವೆಂದರು.
ಸ್ಟೇಟ್ ಬ್ಶಾಂಕ್ ಆಪ್ ಇಂಡಿಯಾ ಬ್ಶಾಂಕ್ ನ ನೆಲ್ಲಿಕಟ್ಟೆ ಬ್ರಾಂಚ್
ಮುಖ್ಶ ವ್ಶವಸ್ಥಾಪಕ ಭವಾನಿ ಯವರು ಬ್ಶಾಂಕಿನ ಸೌಲಭ್ಶಗಳನ್ನು ಜನಸಾಮಾನ್ಶರಿಗೆ ತಲುಪಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ ಸಿ ಟ್ರಸ್ಟ್
ನಿರ್ವಹಿಸುವ ಜವಾಬ್ದಾರಿಗಳು ಹಾಗೂ ಸಂಘದ ಸದಸ್ಶರಿಗೆ 13.5%ಕಡಿತದರದ ಕಡಿಮೆ ಬಡ್ಡಿಯಲ್ಲಿ ವ್ಶಕ್ತಿಯೊಬ್ಬರಿಗೆ 300000 ಲಕ್ಷದ ವರೆಗೆ ಸಾಲ ಪಡೆಯಲು ಸಹಕಾರಿಯಾಗಿದೆ ಎಂದರು.


ಸಮರ್ಥ ಜನಸೇವಾ ಟ್ರಸ್ಟ್ ನ ಅಧ್ಯಕ್ಷ ಗಿರಿಶಂಕರ್
ಸುಲಾಯ ರವರು ಸಂಪನ್ಮೂಲ ವ್ಶಕ್ತಿಯಾಗಿ ಭಾಗವಹಿಸಿದ್ದರು. ದ.ಕ ಜಿಲ್ಲಾ
ನಿರ್ಧೇಶಕ ಪ್ರವೀಣ್ ಕುಮಾರ್ ಸಮಯೋಚಿತವಗಿ
ಮಾತನಾಡಿದರು. ತಾಲೂಕು ಯೋಜನಾಧಿಕಾರಿ ಮೇದಪ್ಪಗೌಡ ಯನ್ ಮಾತನಾಡಿ ಕಳೆದ ಮೂರುವರ್ಷಗಳಿಂದ ಕಡಬ ತಾಲೂಕು ಯೋಜನಾಕಛೇರಿ ಮೂಲಕ ಸಮುದಾಯಕ್ಕೆ ಸಿಕ್ಕಿರುವ ಅನುಧಾನಗಳು ಹಾಗೂ ಸಂಘದ ಸದಸ್ಶರ ಕುಟುಂಬಗಳಿಗೆ ನೀಡಿರುವ ಸಹಾಯಧನದ ವಿವರವನ್ನು ನೀಡಿದರು. ತಾಲೂಕು ಪ್ರಗತಿಬಂಧು ಒಕ್ಕೂಟ ಸಮಿತಿ ಅಧ್ಶಕ್ಷರಾದ ಸಂತೋಷ್ ಕೇನ್ಶ ಅಧ್ಶಕ್ಷತೆ ವಹಿಸಿದ್ದರು.
ತಾಲೂಕು ಜನಜಾಗೃತಿ ವೇಧಿಕೆ ಅಧ್ಶಕ್ಷ ಮಹೇಶ್ ಕೆ ಸವಣೂರು ಜನಜಾಗೃತಿ
ಸದಸ್ಶ ಶಿವಪ್ರಸಾದ್ ರೈ ಮೈಲೇರಿ ˌ ಕಡಬ
ಎಸ್ ಬಿ ಐ ಬ್ಶಾಂಕ್
ನ ವ್ಯವಸ್ಥಾಪಕರಾದ ಸಂದೀಪ್ ಸಿಂಗ್ ಜಿಲ್ಲಾ ಎಮ್ ಐ ಎಸ್ ಯೋಜನಾಧಿಕಾರಿ
ಶಕುಂತಲಾ ಉಪಸ್ಥಿತರಿದ್ದರು.ಕಡಬ ಒಕ್ಕೂಟದ ಅಧ್ಶಕ್ಷೆ ನಳಿನಿ ರೈ ಅನಿಸಿಕೆ ವ್ಶಕ್ತಪಡಿಸಿದರು.ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ಧನ್ಶವಾದವಿತ್ತರು.ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.
ತಾಲೂಕಿನ 62 ಒಕ್ಕೂಟದ ಅಧ್ಶಕ್ಷರುಗಳು ಪಧಾದಿಕಾರಿಗಳು ಉಪಸಮಿತಿ ಸದಸ್ಶರುಗಳು ಮೇಲ್ವೀಚಾರಕ ಶ್ರೇಣಿ ಸಿಬ್ಬಂಧಿಗಳು ಸೇವಾಪ್ರತಿನಿಧಿಗಳು, ಸಿಎಸ್ ಸಿ ಸಿಬ್ಬಂದಿಗಳು ,ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದು ಪ್ರಯೋಜನ ಪಡೆದುಕೊಂಡರು.

