24.2 C
Kadaba
Saturday, March 15, 2025

ಹೊಸ ಸುದ್ದಿಗಳು

ಕಡಬ: ಅರಣ್ಯ ಜಾಗ ಒತ್ತುವರಿ : ಅಡಿಕೆ ತೋಟ ತೆರವುಗೊಳಿಸಿ ನೆಡುತೋಪು ನಿರ್ಮಿಸಿದ ಅರಣ್ಯ ಇಲಾಖೆ

Must read

kadabatimes.in

kadabatimes.in
ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿರುವ ಜಾಗ



ಕಡಬ:
ವ್ಯಕ್ತಿಯೊಬ್ಬರ ವಶದಲ್ಲಿದ್ದ ಅರಣ್ಯ ಭೂಮಿಯನ್ನು  ನ್ಯಾಯಾಲಯದ
ಆದೇಶದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡು ನೆಡುತೋಪು ನಿರ್ಮಿಸಿದ ಘಟನೆ ಐತ್ತೂರು ಗ್ರಾಮದಿಂದ ತಡವಾಗಿ ವರದಿಯಾಗಿದೆ


ಪಶ್ಚಿಮಘಟ್ಟದಲ್ಲಿನ
ಅರಣ್ಯದಲ್ಲಿ 2015 ನಂತರ ಆಗಿರುವ
ಒತ್ತುವರಿಗೆ ಸಂಬಂಧಿಸಿದಂತೆ 64  ಪ್ರಕ್ರಿಯೆ ಪೂರ್ಣಗೊಂಡಿರುವ
ಎಲ್ಲ ಪ್ರಕರಣಗಳಲ್ಲಿ ತೆರವು ಕಾರ್ಯಾಚರಣೆ ಮಾಡಲು  ಸ್ಪಷ್ಟ
ಸೂಚನೆ ನೀಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು
ಮಾದ್ಯಮ ಹೇಳಿಕೆ ಬಿಡುಗಡೆಗೊಳಿಸಿದ್ದರು. ಅಲ್ಲದೆ  ನ್ಯಾಯಾಲಯದಲ್ಲಿರುವ
ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಶ್ಚಿಮಘಟ್ಟ ಅರಣ್ಯ ಒತ್ತುವರಿ ಕಾರ್ಯಪಡೆಗೆ ಸೂಚಿಸಿರುವುದಾಗಿ ಉಲ್ಲೇಖಿಸಿದ್ದರು . ಬೆನ್ನಲ್ಲೇ ಅರಣ್ಯ
ಒತ್ತುವರಿಯ ಬಗ್ಗೆ ಕಡಬ ತಾಲೂಕಿನಲ್ಲಿ ಈ ಪೂರಕ  ಬೆಳವಣಿಗೆಯಾಗಿದೆ.


ಇದೀಗ ಮೂಜೂರು ಮೀಸಲು ಅರಣ್ಯ ವಿಸ್ತರಣಾ ಕ್ಷೇತ್ರದಲ್ಲಿರುವ ಜಾಗವನ್ನು ಅರಣ್ಯ ಇಲಾಖೆಯು  ಸ್ವಾದೀನ ಪಡಿಸಿಕೊಂಡು ಜಾಗದಲ್ಲಿದ್ದ ಅಡಿಕೆ ಮರಗಳನ್ನು  ತೆರವುಗೊಳಿಸಿ
ಗಂಧ ಮತ್ತು ಇತರ ಕಾಡುತ್ಪತ್ತಿ ಗಿಡಗಳನ್ನು ನೆಟ್ಟು ನಡುತೋಪು ನಿರ್ಮಿಸಿ ಅಗಲು ನಿರ್ಮಿಸಿದಲ್ಲದೆ ಇಲಾಖೆಯ ಸೂಚನಾ ಫಲಕ ಅಳವಡಿಸಿದೆ.


ಪ್ರಕರಣದ
ಹಿನ್ನೆಲೆ:
ಕಡಬ ತಾಲೂಕಿನ  ಐತ್ತೂರು
ಗ್ರಾಮದಲ್ಲಿ  ಸರ್ವೆ
ನಂಬರ್ 153/1 ಕೇನ್ಯದ   ವ್ಯಕ್ತಿಯೊಬ್ಬರು ಅರಣ್ಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದಾಗಿ  ಆರೋಪಿಸಿ
2014ರಲ್ಲಿ  ಐತ್ತೂರಿನ
ಸತೀಶ್ .ಕೆ ಎಂಬವರು ಲೋಕಾಯುಕ್ತದಲ್ಲಿ
ದೂರು ದಾಖಲಿಸಿದ್ದರು . ಲೋಕಾಯುಕ್ತ ಪೊಲೀಸರು ಜಂಟಿ ಸರ್ವೆ ನಡೆಸಲು ಸೂಚಿಸಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯು ಜಂಟಿ ಸರ್ವೆ ನಡೆಸಿತ್ತು. 
ಸಂದರ್ಭದಲ್ಲಿ 1.25 ಸೆಂಟ್ಸ್ ಜಾಗ ಮೀಸಲು ಅರಣ್ಯ ಎಂಬುದಾಗಿ ಮತ್ತು 4.98 ಸೆಂಟ್ಸ್ ಜಾಗ ಅರಣ್ಯ ಬಫರ್ ಝೋನ್  ಎಂಬುದಾಗಿ
ತಿಳಿದು ಬಂದಿತ್ತು.

kadabatimes.in


 1.25 ಸೆಂಟ್ಸ್
ಜಾಗ  ಬಿಟ್ಟುಕೊಡುವಂತೆ
ಜಾಗ ಒತ್ತುವರಿದಾರರಿಗೆ ಅರಣ್ಯ ಇಲಾಖೆಯು ನೋಟಿಸ್ ಜಾರಿ ಮಾಡಿತ್ತು, ಅಲ್ಲದೆ ಕಂದಕ ನಿರ್ಮಿಸಿತ್ತು. ಈ ನಡುವೆ  ಜಾಗದ ಪರ ಕೆನ್ಯದ ಮೋಹನ್ ಎಂಬವರು  ಹೈಕೋರ್ಟ್
ಮೆಟ್ಟಿಲೇರಿದ್ದರು.   ಹೀಗಾಗಿ
ಪ್ರಕರಣಕ್ಕೆ ಹೈ ಕೋರ್ಟ್ 
ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.


ನಂತರದ
ಬೆಳವಣಿಗೆಯಲ್ಲಿ  ಅರಣ್ಯ
ಇಲಾಖೆ ಪರವಾಗಿ   ಹೈಕೋರ್ಟಿನ
ಹೆಚ್ಚುವರಿ ಸರ್ಕಾರಿ ವಕೀಲರಾದ ರಾಹುಲ್ ಕಾರಿಯಪ್ಪ ವಾದ ಮಂಡಿಸಿ  01 ಎಕರೆ
25 ಸೆಂಟ್ಸ್ ಅಳತೆಯ ಅರಣ್ಯ ಭೂಮಿಯ ಭಾಗವನ್ನು  ಅತಿಕ್ರಮಿಸಿರುವ
ಬಗ್ಗೆ ನ್ಯಾಯಾಲಯಕ್ಕೆ ದಾಖಲೆ ಸಹಿತ ಮನವರಿಕೆ ಮಾಡಿದ್ದರು. 
ಹೀಗಾಗಿ ಒತ್ತುವರಿದಾರರ ಅರ್ಜಿಯನ್ನು ವಜಾಗೊಳಿಸಿ  ಜಾಗವನ್ನು
ಸ್ವಾದೀನ ಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆಗೆ ಆದೇಶ ಮಾಡಿದೆ.


ಕೋರ್ಟಿನ
ಆದೇಶದ ಬಳಿಕ ವರ್ಷವಾಗುತ್ತಾ ಬಂದರೂ ಅರಣ್ಯ ಇಲಾಖೆಯು ತನ್ನ ಜಾಗವನ್ನು ಸ್ವಾದೀನ ಪಡಿಸಿಕೊಳ್ಳದ ಬಗ್ಗೆ  ಬೆಂಗಳೂರಿನ
ಅರಣ್ಯ ಭವನದಲ್ಲಿರುವ  ಅಪಾರ
ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಮತ್ತು ಜನಸ್ಪಂದನ ಕಾರ್ಯಕ್ರಮದಲ್ಲೂ  ಸತೀಶ್  ಕೆ   ದೂರು
ನೀಡಿದ್ದರು
ಬೆಳವಣಿಗೆಯ ಬಳಿಕ ಅರಣ್ಯ ಇಲಾಖೆಯು 01 ಎಕರೆ 25 ಸೆಂಟ್ಸ್ ಜಾಗವನ್ನು ಸ್ವಾದೀನ ಪಡಿಸಿಕೊಂಡು ಜಾಗದಲ್ಲಿದ್ದ ಅಡಿಕೆಮರಗಳನ್ನು ತೆರವುಗೊಳಿಸಿ ಗಂಧ ಮತ್ತು ಇಅತರ ಕಾಡುತ್ಪತ್ತಿ ಗಿಡಗಳನ್ನು ನೆಟ್ಟು ನಡುತೋಪು ನಿರ್ಮಿಸಿ ಅಗಲು ನಿರ್ಮಿಸಿ ಸೂಚನಾ ಫಲಕ ಅಳವಡಿಸಿದೆ.

ಕೋರ್ಟ್ ಆದೇಶದ ಪ್ರತಿ ಇಲ್ಲಿದೆ :

kadabatimes.in