34.1 C
Kadaba
Saturday, March 15, 2025

ಹೊಸ ಸುದ್ದಿಗಳು

ನೆಟ್ಟಣ: ಅಧಿಕ ಸಂಖ್ಯೆಯಲ್ಲಿ ರೈಲು ಮೂಲಕ ಬಂದಿಳಿದ ಪ್ರವಾಸಿಗರು: ಯಾತ್ರಾ ಸ್ಥಳಕ್ಕೆ ಬಸ್ ಇಲ್ಲದೇ ಕಾದು ಸುಸ್ತೋ ಸುಸ್ತು!

Must read

 

kadabatimes.in
ಬಸ್ಸಿಗಾಗಿ ರಸ್ತೆಯಲ್ಲೇ ಕುಳಿತು ಕಾಯುತ್ತಿರುವ ಪ್ರಯಾಣಿಕರು

kadabatimes.in

ನೆಟ್ಟಣ:
ಇಲ್ಲಿನ
ಸುಬ್ರಹ್ಮಣ್ಯ
ರೋಡ್ ರೈಲು ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರಿಗೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಭಾಗಕ್ಕೆ ತೆರಳಲು ಸಮರ್ಪಕವಾಗಿ ಬಸ್ ಲಭ್ಯವಾಗದೇ ಪ್ರಯಾಣಿಕರು ಹಲವು ತಾಸು ಕಾದು ಸುಸ್ತಾಗಿರುವ ಘಟನೆ ಸೋಮವಾರ ನಡೆದಿದೆ.


ರಜೆ
ಹಿನ್ನಲೆಯಲ್ಲಿ ಭಾರೀ ಸಂಖ್ಯೆಯ ಪ್ರಯಾಣಿಕರು ರೈಲು ಮೂಲಕ ಬೆಳಗ್ಗೆ 8 ಗಂಟೆ ಸುಮಾರಿಗೆ
ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ತೆರಳಲು ರಸ್ತೆ ಬದಿ ಬಸ್ಗಾಗಿ ಕಾದಿದ್ದು, ಸುಮಾರು 10  ಗಂಟೆ
ವರೆಗೂ ಸಮರ್ಪಕ ಬಸ್ ಇಲ್ಲದೆ ಹಲವು ಪ್ರಯಾಣಿಕರು ರಸ್ತೆ ಬದಿ ಕಾಯುತ್ತಿದ್ದ ಸ್ಥಿತಿ ಕಂಡುಬಂದಿತ್ತು.

kadabatimes.in

ರಸ್ತೆ ಬದಿ
ಕುಳಿತ
ಪ್ರಯಾಣಿಕರು:
ಕಡಬಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸಮೀಪದ ನೆಟ್ಟಣದ ರೈಲು ನಿಲ್ದಾಣದಿಂದ ಸಾವಿರಾರು ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ. ರೈಲು ನಿಲ್ದಾಣಕ್ಕೆ ಬಸ್ ತೆರಳುತ್ತಿದ್ದರೂ ಕೆಲ ಸಮಯ ಹೆದ್ದಾರಿ ವರೆಗೆ ಪ್ರಯಾಣಿಕರು ಆಗಮಿಸಬೇಕು. ಆದರೆ ಹೆದ್ದಾರಿ ಬದಿಯಲ್ಲಿ ಸರಿಯಾದ ಬಸ್ ತಂಗುದಾನ ಇಲ್ಲದೇ ಹೆಚ್ಚಿನ ಪ್ರಯಾಣಿಕರಿಗೆ ನಿಲ್ಲಲು ಸಾಧ್ಯವಾಗದ ಪರಿಣಾಮ ಪ್ರಯಾಣಿಕರು ರಸ್ತೆ ಬದಿ ನಿಲ್ಲುವ ಸ್ಥಿತಿ ಇಲ್ಲಿದೆ

ಕೆಲವರು ರಸ್ತೆ ಬದಿಯಲ್ಲೇ ಕುಳಿತಿದ್ದ ದೃಶ್ಯ ಕಂಡುಬಂದಿತ್ತು. ನೆಟ್ಟಣ ಪೇಟೆಯ ಎರಡೂ ಬದಿಯಲ್ಲೂ ಸುಸಜ್ಜಿತ ಬಸ್ ತಂದುದಾನ ನಿರ್ಮಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.

kadabatimes.in