24.5 C
Kadaba
Monday, March 17, 2025

ಹೊಸ ಸುದ್ದಿಗಳು

ಮರ್ದಾಳ: ವೀಡಿಯೋ ಚಿತ್ರೀಕರಣ ವೇಳೆ ಹಲ್ಲೆ, ಮಾನ ಭಂಗ ಯತ್ನ ಆರೋಪ: ಇತ್ತಂಡಗಳ ವಿರುದ್ದ ಪ್ರಕರಣ ದಾಖಲು

Must read

 

kadabatimes.in
ಕಡಬ ಠಾಣೆಯ ಚಿತ್ರ (KADABA TIMES)

kadabatimes.in

ಮರ್ದಾಳ: ಕಟ್ಟಡ ನಿರ್ಮಾಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆಇರುವ
ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಡೆದ ಘಟನೆಗೆ ಸಂಬಂಧಿಸಿ ಮಹಿಳೆಯೊಬ್ಬರು ಮಾನಭಂಗ ಯತ್ನದ ದೂರು
ದಾಖಲಿಸಿದರೆ, ಮತ್ತೋರ್ವರು ಹಲ್ಲೆಯಾಗಿರುವುದಾಗಿ ಆರೋಪಿಸಿ ದೂರು ನೀಡಿದ್ದು ಇತ್ತಂಡಗಳ ವಿರುದ್ದ
ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  


kadabatimes.in

102
ನೆಕ್ಕಿಲಾಡಿ ಗ್ರಾಮದ ಪುಯಿಲದ ಅಜೀಶ್  ಎಂಬವರು ನೀಡಿದ ದೂರಿನಲ್ಲಿ
 ಐತ್ತೂರು ಗ್ರಾಮದ ಕಪ್ಪೆ ಹಳ್ಳದ ಜಾಗದ ಬದಿಯಲ್ಲಿರುವ ಸರಕಾರಿ
ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ನಿಂದ ತಡೆಯಾಜ್ಞೆಯಿದ್ದು ಅಕ್ರಮವಾಗಿ ನಾಲ್ಕು ಜನರನ್ನು
ಕೆಲಸಕ್ಕಿಟ್ಟು ಕೆಲಸ ಮಾಡುತ್ತಿದ್ದು ಇದನ್ನು ವೀಡಿಯೋ ಚಿತ್ರೀಕರಣ ಮಾಡಲು ಮುಂದಾದ ವೇಳೆ ಅವಾಚ್ಯ
ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದಲ್ಲದೆ ಬೆತ್ತದ ಕೋಲಿನಲ್ಲಿ ಹಲ್ಲೆ ಮಾಡಿರುವುದಾಗಿ
  ಆರೋಪಿಸಿ
ಮಹಿಳೆ ಮತ್ತು ಆಕೆಯ ಪತಿ ಬಾಬು ಅವರ ವಿರುದ್ದ ದೂರು ನೀಡಿದ್ದಾರೆ.


ಐತ್ತೂರು ಗ್ರಾಮದ ಕೆರ್ಮಾಯಿಯ ಮಹಿಳೆಯೊಬ್ಬರು   ದೂರು ನೀಡಿ,
ಕಪ್ಪೆ ಪಲ್ಲ(ಕೆರ್ಮಾಯಿ) ಎಂಬಲ್ಲಿಯ ಜಾಗದಲ್ಲಿ ಮನೆ ಕೆಲಸ ಮಾಡುತ್ತಿರುವಾಗ  ಅಕ್ರಮವಾಗಿ
ಜಾಗಕ್ಕೆ ಪ್ರವೇಶಿಸಿ  ದೊಣ್ಣೆಯಿಂದ ಹೊಡೆದು , ನೈಟಿಯನ್ನು
ಹರಿದು ಹಾಕಿ ಮಾನ ಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಿ ಅಜೀಶ್ ಎಂಬವರ
ವಿರುದ್ದ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ  ಕಡಬ ಪೊಲಿಸರು ಇತ್ತಂಡಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

kadabatimes.in