

![]() ![]() |
ಬೆಳ್ಯಪ್ಪ ಗೌಡ (KADABA TIMES) |


ಕುಕ್ಕೆ ಸುಬ್ರಹ್ಮಣ್ಯ : ಮೂರು
ತಿಂಗಳ ಹಿಂದೆ ನಿಗೂಢವಾಗಿ
ಕಾಣೆಯಾಗಿದ್ದ ಸೇವಾಜೆಯ ಬೆಳ್ಯಪ್ಪ ಗೌಡ (85) ಅವರ ತಲೆ ಬುರುಡೆ ಹಾಗೂ ಬಟ್ಟೆ ಸೇವಾಜೆಯ ಬಿದಿರಿನ ಪೊದೆಯಲ್ಲಿ ಪತ್ತೆಯಾಗಿದೆ.
ಸೆ. 9ರಂದು ಮನೆಯಿಂದ ಮಧ್ಯಾಹ್ನದ ವೇಳೆ ಬೆಳ್ಯಪ್ಪ ಗೌಡರು ನಾಪತ್ತೆಯಾಗಿದ್ದರು. ಎಲ್ಲ ಕಡೆ ಹುಡುಕಾಟ ನಡೆಸಿದ್ದರೂ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಮನೆಮಂದಿ ಜೋತಿಷರ ಮೊರೆಯೂ ಹೋಗಿದ್ದರು.


ಪುತ್ರ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳ್ಯಪ್ಪ ಗೌಡ ಅವರ ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ
ಬಿದಿರ ಪೊದೆಯಲ್ಲಿ ತಲೆ ಬುರುಡೆ ಮತ್ತು ಬಟ್ಟೆ ದೊರೆತಿದ್ದು, ಈ ಜಾಗದಲ್ಲಿ ಮೂರು
ತಿಂಗಳ ಹಿಂದೆ ಹುಡುಕಾಟ ನಡೆಸಿದ್ದರೂ, ಅಂದು ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.
ಇದೀಗ ತಲೆ ಬುರುಡೆ ಸಿಕ್ಕಿರುವುದು ಕುತೂಹಲಕ್ಕೆ ಕಾರಣವಾಗಿದೆ.

