34.1 C
Kadaba
Saturday, March 15, 2025

ಹೊಸ ಸುದ್ದಿಗಳು

ನಮ್ಮ ಕಡಬಕ್ಕೆ ಹೆಮ್ಮೆ: ಇಚಿಲಂಪಾಡಿ ಮೂಲದ ಶಿಕ್ಷಣ ಪ್ರೇಮಿಯ ಬಗ್ಗೆ ನಿಮಗೆ ಗೊತ್ತಾ?

Must read

ಕಡಬ ಟೈಮ್: ಲೇಖನ:  ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಸೃಜನಶೀಲ ವ್ಯಕ್ತಿತ್ವದ   ಸೋಮಶೇಖರ ಶೆಟ್ಟಿ ಉಜಿರೆ  ಓರ್ವ ಶಿಕ್ಷಣ ಪ್ರೇಮಿ.   ಮೂಲತ: ಕಡಬ ತಾಲೂಕಿನ  ಇಚಿಲಂಪಾಡಿ ಇವರ ಹುಟ್ಟೂರು . ಶ್ರೀ ಪದ್ಮರಾಜ ಶೆಟ್ಟಿ ಮತ್ತು ಬಿ. ಶಿವದೇವಿ ಅಮ್ಮ ದಂಪತಿಯ ಪುತ್ರ. ಪ್ರಸ್ತುತ ಉಜಿರೆಯಲ್ಲಿ ವಾಸವಾಗಿದ್ದಾರೆ.

kadabatimes.in

kadabatimes.in
ಸೋಮಶೇಖರ ಶೆಟ್ಟಿ ಉಜಿರೆ (KADABA TIMES)



೧೯೭೫ರಲ್ಲಿ ಶಿಕ್ಷಕ ತರಬೇತಿ ಸಂಪೂರ್ಣಗೊಳಿಸಿದ ತಕ್ಷಣ ಬೈಂದೂರು ಸಮೀಪದ ಶ್ರೀ .ಮಂಹಿ.ಪ್ರಾ.ಶಾಲೆ ಮಯ್ಯಾಡಿಯಲ್ಲಿ ಶಿಕ್ಷಕನಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡರುಸತತ ೧೭ ವರುಷಗಳ ಕಾಲ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ೧೯೯೨ರಲ್ಲಿ ಶ್ರೀ .ಮಂ.ಹಿ.ಪ್ರಾಶಾಲೆ ಉಜಿರೆಗೆ ವರ್ಗಾವಣೆಯಾದರು.   ೨೦೧೨ ತನಕ ಶಿಕ್ಷಕನಾಗಿ ಸೇವೆ ಸಲ್ಲಿಸಿ  ೨೦೧೨ ಮೇ ತಿಂಗಳಿನಲ್ಲಿ ಶ್ರೀ .ಮಂ.ಹಿ.ಪ್ರಾ.ಶಾಲೆ ಧರ್ಮಸ್ಥಳಕ್ಕೆ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ ವರ್ಗಾವಣೆಯಾಗಿದರು .೨೦೧೫ರ ತನಕ ಸೇವೆ ಸಲ್ಲಿಸಿ ಬಳಿಕ ನಿವೃತ್ತಿಯಾದರು.


ಎಸ್.ಡಿಎಂ ಶಿಕ್ಷಣ ಸಂಸ್ಥೆಯಲ್ಲಿ
ಅಧ್ಯಾಪಕರಾಗಿ
, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಯಾಗಿ ಐದು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.   ಮುಖ್ಯ ಶಿಕ್ಷಕರಾಗಿ ಸೇವೆ, ಜೈನ್ ಮಿಲನ್ ವಲಯ ನಿರ್ದೇಶಕರಾಗಿ ನಿರ್ವಹಣೆ  , ದಕ್ಷಿಣ ಕನ್ನಡ ಜಿಲ್ಲಾ ವಿಜ್ಞಾನ ಪರಿಷತ್ತಿನ ತಾಲೂಕು ಘಟಕದ ಸದಸ್ಯ,  ಸಮೂಹ ಸಂಘಟನೆಯ ಖಜಾಂಚಿ,  ಕರ್ನಾಟಕ ರಾಜ್ಯ ಜೈನ ಶಿಕ್ಷಕರ ವೇದಿಕೆಯ  ..ಜಿಲ್ಲಾ ಅಧ್ಯಕ್ಷ ಹೀಗೆ ಹಲವು ಸಂಘಟನೆಯಲ್ಲಿ ಸಕ್ರಿಯಾಗಿ ತೊಡಗಿಕೊಂಡಿದ್ದಾರೆ.  


ಅಂತರರಾಷ್ಟ್ರೀಯ ಜೇಸಿ ಸಂಸ್ಥೆಯ ಪೂರ್ವ ಅಧ್ಯಕ್ಷರಾಗಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸಹಾಯಕ ಕಮಿಷನರ್ ಆಗಿಯೂ ತನ್ನ ಮುಂದಾಳತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಯಾವುದೇ ಜವಾಬ್ದಾರಿಯನ್ನು ವಹಿಸಿಕೊಂಡರೂ ಯಶಸ್ವಿಯಾಗಿ ನಿರ್ವಹಿಸಬಲ್ಲ, ಶ್ರದ್ಧೆ, ಪ್ರಾಮಾಣಿಕತೆ, ಬದ್ಧತೆ ಇವರದು .ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದ್ದಾರೆ.

 

ಸ್ವಾಸ್ಥ್ಯ ಸಂಕಲ್ಪ, ಮೌಲ್ಯ ಶಿಕ್ಷಣ, ಜೀವನ ಕೌಶಲ್ಯ ಮತ್ತು ಜೀವನ ಮೌಲ್ಯಗಳು, ಶಿಕ್ಷಕರ ಪುನಃಶ್ಚೇತನ ಶಿಬಿರ, ಪರಿಣಾಮಕಾರಿ ಭಾಷಣ ಕಲೆ, ಸಭಾ ನಡವಳಿಕೆಗಳು, ಇತ್ಯಾದಿ ವಿಷಯಗಳಲ್ಲಿ, ಸಮರ್ಥವಾಗಿ ಮಾರ್ಗದರ್ಶನ ಮಾಡುವ ಇವರು ಅನೇಕ ತರಗತಿ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆಸಾಹಿತ್ಯಿಕ ಕಾರ್ಯಕ್ರಮದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ ತೋರಿರುವ ಇವರು  ಉತ್ತಮ ಈಜುಗಾರ, ರಾಜ್ಯಮಟ್ಟದ ವಾಲಿಬಾಲ್ಆಟಗಾರರಾಗಿ ಮಿಂಚಿದವರು.

kadabatimes.in

 

ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ, ಮಹಾನಡಾವಳಿ, ವಿಶ್ವ ತುಳು ಸಮ್ಮೇಳನ, ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ, ಬಸದಿಗಳ ಪಂಚಕಲ್ಯಾಣ ಹಾಗೂ ಬೇರೆ ಬೇರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿವಿಧ ಜವಾಬ್ದಾರಿಗಳನ್ನು  ಸಮರ್ಥವಾಗಿ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. . ಎಸ್.ಡಿ.ಎಂ. ಕಲಾ ಕೇಂದ್ರದ ಎಸ್.ಡಿ.ಎಂ. ಕಲಾವೈಭವ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಯಾವತ್ತೂ ಇವರು ಪ್ರಶಸ್ತಿಯ ಬೆನ್ನೇರಿ ಹೋದವರಲ್ಲ, ಪ್ರಶಸ್ತಿಗಳೇ ಇವರ ಬೆನ್ನು ಹತ್ತಿವೆ.

 

 ಪ್ರಶಸ್ತಿಗಳು :

  • ೨೦೧೦ರಲ್ಲಿ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ
  •  ೨೦೦೩೦೪ ಸಾಲಿನ .. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ.
  • ೧೯೯೯೨೦೦೦ ಸಾಲಿನ ತಾಲೂಕಿನ ಪ್ರತಿಭಾವಂತ ಪ್ರಶಸ್ತಿ
  •  ಮುರುಗರಾಜೇಂದ್ರ ಮಠ ಚಿತ್ರದುರ್ಗ ವತಿಯಿಂದ ಶಿಕ್ಷಕ ಭೂಷಣ ಪ್ರಶಸ್ತಿ.
  •  .. ಜಿಲ್ಲಾ ಮಟ್ಟದ ಶಿಕ್ಷಣ ಪ್ರೇಮಿ ಪ್ರಶಸ್ತಿ.
  • ರಾಜ್ಯಮಟ್ಟದ ಬಸವ ಜ್ಯೋತಿ ಪ್ರಶಸ್ತಿ.
  •  ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಅಂತರರಾಷ್ಟ್ರೀಯ ಸಂಸ್ಥೆ ಜೇಸಿ ವತಿಯಿಂದ ಎಚ್.ಜಿ.ಎಫ್. ಪ್ರಶಸ್ತಿ ಮತ್ತು ಜೀಸಿ ಸಂಸ್ಥೆಯ ಸಾಧನಾ ಶ್ರೀ ,ಪ್ರಶಸ್ತಿ

 

ಹೀಗೆ  ಸಾಧನೆಯ ಹಾದಿಯಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರ ಹಾಗೂ ಸನ್ಮಾನಗಳಿಗೆ ಭಾಜನರಾಗಿದ್ದಾರೆಸಾಧಿಸುವ ಛಲ ಇದ್ದರೆ ಯಾವುದೇ ಸವಾಲು ಬಂದರೂ ಅದನ್ನು ಲೆಕ್ಕಿಸದೆ ಮುನ್ನಡೆದರೆ ಯಶಸ್ಸು ಖಚಿತ ಎಂಬುದಕ್ಕೆ ಇವರೇ ಸಾಕ್ಷಿ. ಪ್ರತಿಭೆಗಳಲ್ಲಿ ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ಭೇದ ಮರೆತು ಎಲ್ಲರನ್ನೂ ಸಮಾನತೆಯಿಂದ ನೋಡುವ ಮತ್ತು ಪ್ರೋತ್ಸಾಹ ನೀಡುತ್ತಿರುವ ಒಬ್ಬ ಹೃದಯಶ್ರೀಮಂತ ವ್ಯಕ್ತಿಯಾಗಿ, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕ ಹಾಗೂ ಸ್ಫೂರ್ತಿದಾಯಕರಾಗಿದ್ದಾರೆ


ಇವರ ಪ್ರತಿ ಸಾಧನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ   ಕುಟುಂಬಸ್ಥರ ಪ್ರೋತ್ಸಾಹವೇ ಮೂಲ ಕಾರಣ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಇವರು.  ಇವರು ನಡೆದು ಬಂದ ದಾರಿ, ಸಾಧಿಸಿದ ಕ್ಷೇತ್ರ ಮತ್ತು ಇವರ ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಆಶಿಸೋಣ.

kadabatimes.in

 ಬರಹ : ಸುರೇಂದ್ರ ಜೈನ್ ,ನಾರಾವಿ