24.5 C
Kadaba
Monday, March 17, 2025

ಹೊಸ ಸುದ್ದಿಗಳು

ತಡರಾತ್ರಿ ಅಂಗಡಿ ಮತ್ತು ದೈವಸ್ಥಾನದ ಹುಂಡಿ ಕಳ್ಳತನ ಪ್ರಕರಣ: ಆರೋಪಿಯನ್ನು ಬಂಧಿಸಿದ ಸುಬ್ರಹ್ಮಣ್ಯ ಪೊಲೀಸರು

Must read

 ಸುಬ್ರಹ್ಮಣ್ಯ:
ಗುತ್ತಿಗಾರಿನ  2-3 ಅಂಗಡಿಗಳಿಗೆ
ನುಗ್ಗಿ ಕಳ್ಳತನ ನಡೆದಿರುವ ಹಾಗೂ ಮುತ್ತಪ್ಪ ತಿರುವಪ್ಪ ದೈವಸ್ಥಾನದಿಂದಲೂ ತಡರಾತ್ರಿ  ಹುಂಡಿ
ಕಳ್ಳತನ ನಡೆದಿತ್ತು.

kadabatimes.in


kadabatimes.in

ಗುತ್ತಿಗಾರಿನ
ಗಣೇಶ್‌ ಅವರ ತರಕಾರಿ ಅಂಗಡಿ, ಮೇಲಿನ ಪೇಟೆಯ ಅಂಗಡಿಯೊಂದರಿಂದ ಹಾಗೂ ಮುತ್ತಪ್ಪ ತಿರುವಪ್ಪ ದೈವಸ್ಥಾನದ ಎದುರಿನ ಸಣ್ಣ ಹುಂಡಿ ಕಳ್ಳತನ  ನಡೆದಿದ್ದು
ಸುಬ್ರಹ್ಮಣ್ಯ ಠಾಣೆಯಲ್ಲಿ
ಪ್ರಕರಣ ದಾಖಲಾಗಿತ್ತು.


kadabatimes.in

ಸಿಸಿಟಿವಿ
ದೃಶ್ಯಾವಳಿಗಳ ಆಧಾರ ಮತ್ತು ಇತರ ಮಹತ್ವದ ಸುಳಿವಿನ ಆಧಾರದಲ್ಲಿ
ಓರ್ವ  ಆರೋಪಿಯನ್ನು ಬಂಧಿಸಿದ್ದಾರೆ.
 ಬಂಧಿತನನ್ನು
ಕೊಲ್ಲಮೊಗ್ರು ಗ್ರಾಮದ ನಿವಾಸಿ ಕರುಣಾಕರ ಎಂದು ಗುರುತಿಸಲಾಗಿದೆ. ಈತ
ಸರಣಿ ಕೃತ್ಯಗಳನ್ನು ನಡೆಸಿದ್ದ ಎಂದು ಆರೋಪಿಸಲಾಗಿದ್ದು, ಪೋಲೀಸರು ಮಹಜರು ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 


kadabatimes.in

ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್  ತಿಮ್ಮಪ್ಪ ನಾಯ್ಕ್ ರವರ ಮಾರ್ಗದರ್ಶನದಲ್ಲಿ  ಠಾಣಾಧಿಕಾರಿ ಕಾರ್ತಿಕ ಕೆ ,  ಎಸ್ ಐ ಮಹೇಶ್ ಪಿ , ಸಿಬ್ಬಂದಿಗಳಾದ  ಆಕಾಶ್, ಸತೀಶ್ , ಮಹೇಶ್, ನವೀನ್ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.