

ಕಡಬ ಟೈಮ್, ಪ್ರಮುಖ ಸುದ್ದಿ: ಕಾರು
ಚಾಲಕ ದ್ವಿಚಕ್ರವಾಹನಕ್ಕೆ ಅಪಘಾತವನ್ನುಂಟು ಮಾಡಿ ಮೊದಲು ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿ ನಂತರ ನೀಡದೆ ಇರುವುರಿಂದ ಚಾಲಕನ ವಿರುದ್ದ ತಡವಾಗಿ ಕಡಬ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ
ಗ್ರಾಮದ ಕಳಾರ ನಿವಾಸಿ ಹಸೈನಾರ್ ಎಂಬವರು
ಜ.23 ರಂದು ಕಳಾರದ ಇಟ್ಟಿಗೆ ಪ್ಯಾಕ್ಟರಿ ಎದುರು ಡಾಮಾರು ರಸ್ತೆಯ ಬಳಿ ತನ್ನ ದ್ವಿಚಕ್ರ
ವಾಹನ ನಿಲ್ಲಿಸಿ ರಸ್ತೆ ದಾಟಿ ಕಡಬ ಕಡೆಗೆ ಬರಲು ಕಾಯುತ್ತಿರುವ
ಸಮಯದಲ್ಲಿ ಕಡಬ
ಕಡೆಯಿಂದ ಬಂದ ಕಾರು
ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿಕೊಂಡು
ಬಂದು ದ್ವಿಚಕ್ರ
ವಾಹನಕ್ಕೆ ಡಿಕ್ಕಿ ಉಂಟುಮಾಡಿದ್ದರು.


ಡಿಕ್ಕಿ
ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನ
ಬಲಕಾಲಿನ ತೊಡೆಗೆ ಮತ್ತು ಬಲಕೈಗೆ ಹಾಗೂ ತಲೆಗೆ ರಕ್ತ ಗಾಯವಾಗಿದು ಕೂಡಲೇ ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವ ಹಿನ್ನೆಲೆ ಆಂಬುಲೆನ್ಸ್
ಮೂಲಕ ಮಂಗಳೂರಿನ
ಖಾಸಗಿ ಆಸ್ಪತ್ರೆಗೆ
ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಾಗಿದ್ದರು.
ಅಪಘಾತದಿಂದ
ದ್ವಿಚಕ್ರ ವಾಹನ ಮತ್ತು ಕಾರಿಗೂ ಹಾನಿಯಾಗಿತ್ತು. ಅಪಘಾತಕ್ಕೆ ಕಾರು ಚಾಲಕ ಅಬ್ದುಲ್ ನಾಸಿರ್ ಅಜಾಗರೂಕತೆ ಹಾಗೂ ನಿರ್ಲಕ್ಷತನವೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದು , ಕಾರು ಚಾಲಕನು ಮೊದಲು
ಚಿಕಿತ್ಸಾ ವೆಚ್ಚವನ್ನು ಭರಿಸುತ್ತೇನೆ ಎಂದು ಹೇಳಿ ಚಿಕಿತ್ಸಾ ವೆಚ್ಚ ಹೆಚ್ಚು ತಗುಲುವುದರಿಂದ ವೆಚ್ಚವನ್ನು ಭರಿಸದೇ ಇರುವುದರಿಂದ ರಮಾ ಎಂಬವರು ನೀಡಿದ
ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

