33.3 C
Kadaba
Saturday, March 15, 2025

ಹೊಸ ಸುದ್ದಿಗಳು

ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಎಲ್ಲ 12 ಸ್ಥಾನಗಳು ಸಹಕಾರ ಭಾರತಿ ತೆಕ್ಕೆಗೆ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ: . ಕಳೆದ ಅವಧಿಯಲ್ಲಿ  ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ಒಪ್ಪಂದ ನಡೆದು 9 ಸ್ಥಾನಗಳು ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ಹಾಗೂ 3 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರಿಗೆ ಹಂಚಿಕೊಂಡ  ಕಾರಣದಿಂದಾಗಿ ಚುನಾವಣೆ ನಡೆಯದೆ ಎಲ್ಲಾ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿತ್ತು.

kadabatimes.in

ಈ ವರ್ಷ  ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜ. 19ರಂದು ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗಾಗಿ. ಕಡಬ ಸರಕಾರಿ ಮಾದರಿ ಹಿ.ಪ್ರಾ.ಶಾಲೆಯಲ್ಲಿ  ನಡೆದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಜಯಭೇರಿ ಭಾರಿಸುವ ಮೂಲಕ ಮತ್ತೆ ಅಧಿಕಾರ ಉಳಿಸಿಕೊಂಡಿದ್ದಾರೆ.

kadabatimes.in

ಒಟ್ಟು 31 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 5 ಮಂದಿ ನಾಮಪತ್ರ ಹಿಂಪಡೆದ ಪರಿಣಾಮಯವಾಗಿ ಒಟ್ಟು 26 ಮಂದಿ ಸ್ಪರ್ಧಾ ಕಣದಲ್ಲಿ ಉಳಿದಿದ್ದರು .

kadabatimes.in

ಸಾಲಗಾರರಲ್ಲದ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ(171ಮತ), ಸಾಲಗಾರ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಗಿರೀಶ್‌ಕುಮಾರ್ ಎ.ಪಿ.(1073ಮತ), ತಮ್ಮಯ್ಯ ಗೌಡ ಸುಳ್ಯ(1018 ಮತ), ಪುರುಷೋತ್ತಮ ಕಲ್ಲಂತಡ್ಕ (986ಮತ), ರಘುಚಂದ್ರ ಗೌಡ ಕೊಣಾಜೆ(955ಮತ), ರಾಮಚಂದ್ರ ಗೌಡ ಎಲುವಾಳೆ(858ಮತ), ಸಾಲಗಾರ ಕ್ಷೇತ್ರದ ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಲತಾ ರೈ ಎ.(1234ಮತ), ವಸಂತಿ ಗೌಡ ಪುಯಿಲ(1296ಮತ), ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಹರಿಶ್ಚಂದ್ರ ಪಿ.(1203ಮತ), ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಸತೀಶ್ಚಂದ್ರ ರೈ ಮೈಕಾಜೆ(906ಮತ), ಸಾಲಗಾರ ಕ್ಷೇತ್ರದ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಸದಾನಂದ ಪಿ.(1163ಮತ) ಹಾಗೂ ಸಾಲಗಾರ ಕ್ಷೇತ್ರದ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ತನಿಯಪ್ಪ (1111ಮತ) ಅವರು ಜಯಗಳಿಸಿದ ಅಭ್ಯರ್ಥಿಗಳು.

kadabatimes.in

ಸಾಲಗಾರ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಗಿರಿಧರ ರೈ (380 ಮತ), ಚಂದ್ರಶೇಖರ ಕೋಡಿಬೈಲು (756 ಮತ), ಭವಾನಿಶಂಕರ ಮೇಲಂಟ 459 ಮತ, ಸತೀಶ್ ನಾಯ್ಕ್ ಕೆ. (514 ಮತ), ಸುದರ್ಶನ ಗೌಡ ಕೋಡಿಂಬಾಳ (470 ಮತ), ಹರಿಪ್ರಸಾದ್ ಪಣೆಮಜಲು (473 ಮತ), ಹಿಂದುಳಿದ ವರ್ಗ ಎ. ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಶಾಕೀರ್ ಪಿಲ್ಯ (475 ಮತ), ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿದ ಕುಶಾಲಪ್ಪ ಗೌಡ ಬಿ. (184 ಮತ), ಪ್ರಸಾದ್ ಎಂ.(88 ಮತ), ಹರಿಪ್ರಸಾದ್ ಗೌಡ ಎನ್ಕಜೆ (398 ಮತ) ಮಹಿಳಾ ಮೀಸಲು ಸ್ಥಾನದಲ್ಲಿ ಸ್ಪರ್ಧಿಸಿದ ಯಶೋದ ರಮೇಶ್ ಗೌಡ (786 ಮತ) ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಸ್ಪರ್ಧಿಸಿದ ಶೀನ ನಾಯ್ಕ್ (549 ಮತ), ಪರಿಶಿಷ್ಠ ಜಾತಿ ಮೀಸಲು ಸ್ಥಾನದಿಂದ ಸ್ಪರ್ಧಿಸಿದ ಬಾಬು ಮುಗೇರ (622 ಮತ) ಹಾಗೂ ಸಾಲಗಾರರಲ್ಲದ ಕ್ಷೇತ್ರದಲ್ಲಿ ಸ್ಪರ್ಧಿಸಿದ ಸಂತೋಷ್ ಗೌಡ ಕೆ. (31 ಮತ) ಪರಾಜಿತರಾಗಿದ್ದಾರೆ.