ಕಡಬ ಟೈಮ್, ಪಟ್ಟಣ ಸುದ್ದಿ: ಇಲ್ಲಿನ ಜಯದುರ್ಗಾಪರಮೇಶ್ವರೀ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕ ಮಹೋತ್ಸವವು ಏ.16ರಿಂದ 21ರವರೆಗೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮಾ.16ರಂದು ಚಪ್ಪರ ಮುಹೂರ್ತ ಹಾಗೂ ಸಾಮೂಹಿಕ ಶ್ರಮದಾನ ನಡೆಯಲಿದೆ.


ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ಕಾರ್ಯಾಲವು ಈಗಾಗಲೇ ಉದ್ಘಾಟನೆಗೊಂಡಿದ್ದು, ಪೂರ್ವ ತಯಾರಿಗಳು ನಡೆದಿದೆ.ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಯ ಸಂಚಾಲಕರು, ಸದಸ್ಯರನ್ನು ಸೇರಿಸಿಕೊಂಡು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ.




ಬ್ರಹ್ಮಕುಂಭಾಭಿಷೇಕದ ಅಧ್ಯಕ್ಷ ಅರುಣ್ ಕುಮಾರ್ ಜಡೆಮನೆ, ಗೌರವಾಧ್ಯಕ್ಷ ಎಂ. ಸುರೇಶ್ ರಾವ್, ಶ್ರೀ ಶೃಂಗೇರಿ ಜಗದ್ಗುರು ಅಭಿನಂದನ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಅವರ ಮುಂದಾಳತ್ವದಲ್ಲಿ ಕೆಲಸ ಕಾರ್ಯಗಳು ನಡೆಯಲಿದೆ.


ಏ.16ರಿಂದ ಏ.21ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕುಂಭಾಭಿಷೇಕ ಮಹೋತ್ಸವ ವಿಜೃಂಭನೆಯಿಂದ ನಡೆಸಲು ಉದ್ದೇಶಿಸಲಾಗಿದೆ.