ಕಡಬ ಟೈಮ್, ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ಮಾರ್ಚ್ ತಿಂಗಳ “ಗೌರವ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್” ಪುರಸ್ಕಾರವನ್ನು ಕೊಲ್ಯೊಟ್ಟು ಅಂಗನವಾಡಿ ಕಾರ್ಯಕರ್ತೆ ಸಂಪಾವತಿ ಅವರಿಗೆ ನೀಡಿ ಗೌರವಿಸಲಾಯಿತು.


ಸಂಪಾವತಿ ಅವರು ಕಳೆದ 28 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದು, ಸಮಾಜಮುಖಿ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕಾಮದೇನು ಮಹಿಳಾ ಸಂಘದ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.






ಅವರ ಶ್ರಮವನ್ನು ಗುರುತಿಸಿ, ಜೆಸಿಐ ನೆಲ್ಯಾಡಿ ಘಟಕ ಈ ಪುರಸ್ಕಾರವನ್ನು ನೀಡಿ ಗೌರವಿಸಿತು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷೆ ಜೆಸಿ ಸುಚಿತ್ರ ಬಂಟ್ರಿಯಲ್, ಮಹಿಳಾ ಜೆಸಿ ಅಧ್ಯಕ್ಷೆ ಜೆಸಿ ಪ್ರವೀಣಿ ಸುಧಾಕರ್ ಶೆಟ್ಟಿ, ಕಾರ್ಯದರ್ಶಿ ನವ್ಯಾ ಪ್ರಸಾದ್, ಜೆಸಿ ಸುರಕ್ಷಿತಾ ಶೆಟ್ಟಿ, ಜೊತೆ ಕಾರ್ಯದರ್ಶಿ ಜೆಸಿ ಲೀಲಾ ಮೋಹನ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶ್ರೀಮತಿ ಲೀಲಾ ಮತ್ತಿತರರು ಭಾಗವಹಿಸಿದ್ದರು.