ಉಪ್ಪಿನಂಗಡಿ: ಕುಮಾರಧಾರ ನದಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ಮಾ.11 ರಂದು ನಡೆದಿದೆ.


ಗೋಳಿತೊಟ್ಟು ನಿವಾಸಿ ರವಿಚಂದ್ರ ಅವರ ಪುತ್ರ ಗಗನ್ (19 ವ.) ಮೃತ ಯುವಕ.




ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಯುವಕ ಸೋಮವಾರ ಬಾಡಿಗೆಗೆ ಎಂದು ಮನೆಯಿಂದ ಹೋಗಿದ್ದು, ಮಂಗಳವಾರ ಮೃತದೇಹ ಉಪ್ಪಿನಂಗಡಿ ನದಿಯಲ್ಲಿ ಪತ್ತೆಯಾಗಿದೆ.


ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಹೆಚ್ಚಿನ ಮಾಹಿತಿ ತನಿಖೆ ನಂತರವಷ್ಟೇ ತಿಳಿಯಬೇಕಿದೆ.