39.8 C
Kadaba
Sunday, March 16, 2025

ಹೊಸ ಸುದ್ದಿಗಳು

ಕಡಬ: ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಮೊಂಬತ್ತಿ ಹಿಡಿದು, ಭಿತ್ತಿಪತ್ರ  ಪ್ರದರ್ಶನ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್, ಪಟ್ಟಣ ಸುದ್ದಿ: ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯನ್ನು ವಿರೋಧಿಸಿ ಕೊರುಂದೂರು ಯೂತ್ ಫ್ರೆಂಡ್ಸ್ ಸಂಘಟನೆಯು ಮೊಂಬತ್ತಿ ಹಿಡಿದು, ಭಿತ್ತಿಪತ್ರ  ಪ್ರದರ್ಶಿಸಿ ವಿರೋಧಿಸಿದೆ.

kadabatimes.in

ಈ ಸುದ್ದಿ ಓದಿರಿ: ಆಲಂಕಾರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತಿ ವಿರುದ್ದ ಬಿಜೆಪಿಯ ಮತ್ತೊಂದು ತಂಡವೇ ಸ್ಪರ್ಧೆ

kadabatimes.in

ಈ ಸಂದರ್ಭದಲ್ಲಿ ಮಾತನಾಡಿದ  ಬಹು ಉಸ್ತಾದ್ ಮಹಮ್ಮದ್ ಮುಸ್ತಫಾ ಇರ್ಫಾನಿ ಅವರು ಮಾತನಾಡಿ ವಕ್ಫ್ ಎನ್ನುವುದು ಮುಸ್ಲಿಂ ಸಮುದಾಯದ ಆಸ್ತಿ ಮತ್ತು ಹಕ್ಕು. ಅದನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ವಕ್ಫ್ ಕಾಯ್ದೆಯನ್ನು ವಿರೋದಿಸಲು ಮತ್ತು ಅದನ್ನು ಜಾರಿಗೆ ಬರದಂತೆ  ತಡೆಯಲು ಮುಸ್ಲಿಂ ಸಮುದಾಯದ ಯಾವುದೇ ತ್ಯಾಗ ಸಹಿಸಲು ಸಿದ್ದವಾಗಿ ನಿಂತಿದೆ ಎಂದರು.

ಅಲ್ಲದೆ  ಸಮುದಾಯದ ಏಳಿಗೆಗಾಗಿ ಹಿಂದಿನ ತಲೆಮಾರಿನ ದಾನಿಗಳು ನೀಡಿದ ಸ್ವತ್ತು ಅದನ್ನು ಮುಟ್ಟುವ ಆಸೆಯನ್ನು ಕೇಂದ್ರ ಸರ್ಕಾರ ಹೊಂದಿದ್ದರೆ ಅದು ಕೇವಲ ಆಸೆಯಾಗಿ ಉಳಿಯಲಿದೆ  ಎಂದು ಆಕ್ರೋಶ ಹೊರ ಹಾಕಿದ್ದಾರೆ.

kadabatimes.in

ಈ ಸುದ್ದಿ ಓದಿರಿ:ಕಡಬ: ಮೂರು ಬಾರಿ ದೈವಸ್ಥಾನದ ಕಾಣಿಕೆ ಹುಂಡಿ ಒಡೆದ ಕಳ್ಳ ಕೊನೆಗೂ ಸಿಕ್ಕಿಬಿದ್ದ

ಸಂಘಟನೆಯ ಪ್ರಮುಖರಾದ  ಜಮಾಲ್ , ಸಿದ್ದೀಕ್ ಕೊರುಂದೂರು, ಅಫ್ನಾನ್ , ಬಶೀರ್ ಕೊರುಂದೂರು, ಸುಹೈಲ್ , ಅಬೂಬಕ್ಕರ್, ಇಸ್ಮಾಯಿಲ್, ಮುಹಮ್ಮದ್, ನಝೀರ್, ಮುಹಮ್ಮದ್ ಅಲಿ,  ಕಬೀರ್, ಶಫಿಯುಲ್ಲಾ ಸೇರಿದಂತೆ ಹಲವಾರು ಯೂತ್ ಫ್ರೆಂಡ್ಸ್ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಓದಿರಿ: ಕಡಬ: ಎಡಮಂಗಲ ಗ್ರಾಮ ಸಭೆಗೆ ಬಂದದ್ದು ಬರೇ 13 ಗ್ರಾಮಸ್ಥರು

kadabatimes.in