ಕಡಬ ಟೈಮ್ಸ್, ಸುಳ್ಯ: ರಸ್ತೆಯಲ್ಲಿ ಹೋಗುತ್ತಿದ್ದ ಸ್ಕೂಟಿಗೆ ಏಕಾಏಕಿ ಕಾಡು ಹಂದಿ ಅಡ್ಡ ಬಂದ ಕಾರಣ ನಿಯಂತ್ರಣ ಕಳೆದುಕೊಂಡು ಸ್ಕೂಟಿ ಪಲ್ಟಿಯಾಗಿ ಸವಾರ ಗಾಯಗೊಂಡ ಘಟನೆ ಸುಳ್ಯದಿಂದ ವರದಿಯಾಗಿದೆ.


ಅಜ್ಜಾವರ ಗ್ರಾಮದ ಮೇನಾಲ ಎಂಬಲ್ಲಿ ಫೆ.2 ರಾತ್ರಿ ಈ ಘಟನೆ ನಡೆದಿದ್ದು ಫಾಸ್ಟ್ ಪುಡ್ ಅಂಗಡಿ ನಡೇಸುತ್ತಿರುವ ಭಾಸ್ಕರ ಎಂಬವರು ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.






ರಾತ್ರಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ರಬ್ಬರ್ ಕೂಪ್ ಒಳಗಿನಿಂದ ದೊಡ್ಡ ಗಾತ್ರದ ಹಂದಿಯೊಂದು ರಸ್ತೆಗೆ ಬಂದು ಸ್ಕೂಟಿಗೆ ಗುದ್ದಿದೆ. ಹಂದಿ ವಾಪಾಸು ರಬ್ಬರ್ ಕೂಪ್ ಹತ್ತಿ ಹೋಯಿತೆಂದು ತಿಳಿದು ಬಂದಿದೆ.