ಕಡಬ ಟೈಮ್, ಸುಬ್ರಹ್ಮಣ್ಯ : ಇಲ್ಲಿನ ಠಾಣಾ ವ್ಯಾಪ್ತಿಯ ಏನೆಕಲ್ಲು ಬಳಿ ಅಕ್ರಮವಾಗಿ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಫೆ.23 ರಂದು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.


ಪಂಜ ಕಡೆಯಿಂದ ಸುಬ್ರಹಣ್ಯ ಕಡೆಗೆ ದನವೊಂದನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ತಕ್ಷಣ ಠಾಣಾ ಸಿಬ್ಬಂದಿಗಳ ಜೊತೆಗೆ ಇಲಾಖಾ ಜೀಪಿನಲ್ಲಿ ಹೊರಟು ಪಂಜ –ಸುಬ್ರಹ್ಮಣ್ಯ ರಾಜ್ಯ ರಸ್ತೆಯಲ್ಲಿ ಹೋಗಿ ಕಡಬ ತಾಲೂಕು ಯೇನೇಕಲ್ಲು ಗ್ರಾಮದ ಬೂದಿಪಳ್ಳ ಎಂಬಲ್ಲಿ ಪಂಜ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದರು.


ಈ ವೇಳೆ ಪಂಜ ಕಡೆಯಿಂದ KL 14 K 197 ನೇ ಬಿಳಿ ಬಣ್ಣದ ಕಾರು ವಾಹನವೊಂದು ಬರುತ್ತಿದ್ದು ಕಾರನ್ನು ನಿಲ್ಲಿಸಿ ನೋಡಲಾಗಿ ಕಾರಿನಲ್ಲಿ ಹಿಂಬದಿ ಸೀಟಿನಲ್ಲಿ ದನವೊಂದನ್ನು ಹಿಂಸಾತ್ಮಕವಾಗಿ ಕಟ್ಟಿರುವುದು ಕಂಡು ಬಂದಿದೆ.


ಆರೋಪಿತನಲ್ಲಿ ದನವನ್ನು ಸಾಗಾಟ ಯಾವುದೇ ಪರವಾನಗಿ ಇಲ್ಲವಾಗಿ ತಿಳಿಸಿದ್ದು ನಂತರ ಆರೋಪಿತನ್ನನು ಕುಲಂಕಷವಾಗಿ ವಿಚಾರಿಸಿದಾಗ ದನವನ್ನು ಪಂಜ ದ ವ್ಯಕ್ತಿಯೊಬ್ಬರಿಂದ 2500/-ಖರೀದಿಸಿ ಕೇರಳ ಕಾಸರಗೂಡು ಎಂಬಲ್ಲಿಗೆ ಮಾಂಸ ಮಾಡಿ ಮಾರಾಟ ಮಾಡುವರೇ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದು ಕಾರು ಮತ್ತು ದನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ,ಕ್ರ 10/2025 ಕಲಂ: 4,5,7,12 ಕರ್ನಾಟಕ ಗೋವುಗಳ ಸಂರಕ್ಷಣಾ & ಜಾನುವಾರು ಪ್ರತಿಬಂಧಕ ಕಾಯ್ದೆ -2020 ಕಲಂ:11(1) ಪ್ರಾಣಿ ಸಂರಕ್ಷಣಾ ಕಾಯ್ದೆ-1960 & ಕಲಂ:66,192(ಎ)ಭಾರತೀಯ ಮೋಟಾರು ವಾಹನ ಕಾಯ್ದೆ-1988 ಯಂತೆ ಪ್ರಕರಣ ದಾಖಲಾಗಿರುತ್ತದೆ.