27.2 C
Kadaba
Friday, March 14, 2025

ಹೊಸ ಸುದ್ದಿಗಳು

ಉಪ್ಪಿನಂಗಡಿ ಮಖೆ ಜಾತ್ರೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಕುಖ್ಯಾತ  ಆರೋಪಿ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್ಸ್, ಉಪ್ಪಿನಂಗಡಿ:  ಮಖೆ ಜಾತ್ರೆ ಸಡಗರದಲ್ಲಿದ್ದ  ಜನರು  ಯುವಕನೋರ್ವ ನದಿಗೆ ಹಾರಿದ ಎಂಬ ಸುದ್ದಿ ತಿಳಿದು ಆತಂಕಕ್ಕೆ ಒಳಗಾದ ವಿದ್ಯಮಾನ  ರಾತ್ರಿ  ನಡೆದಿದ್ದು ಆತ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ  ಆರೋಪಿ ಎಂಬ ಮಾಹಿತಿ ಲಭ್ಯವಾಗಿದೆ.

kadabatimes.in

ಜಾತ್ರೆಯಲ್ಲಿ  ಬಂದೋಬಸ್ತು ನಿರತ ಪೊಲೀಸಕ ಕಣ್ಣಿಗೆ ಹಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೋರ್ವ ಕಂಡುಬಂದಿದ್ದ. ಕೂಡಲೇ ಪೊಲೀಸರು ಆತನನ್ನು ಹಿಂಬಾಲಿಸುತ್ತಾರೆ. ಇದನ್ನು  ಅರಿತ ಆತ ಕ್ಷಣಾರ್ಧದಲ್ಲಿ ಪರಾರಿಯಾಗಲು ಯತ್ನಿಸುತ್ತಾನೆ. ದೇಗುಲದ ರಥೋತ್ಸವ ನಡೆಯುತ್ತಿದ್ದಂತೆಯೇ ಪೊಲೀಸರು ನೇತ್ರಾವತಿ ಹಾಗೂ ಕುಮಾರಧಾರಾ ನದಿ ಸಂಗಮ ಸ್ಥಳದತ್ತ ಧಾವಿಸುತ್ತಿರುವುದು ಕಂಡು ಬಂದಿತ್ತು. ಜತೆಗೆ ಭಕ್ತರು ಕೂಡ ಅತ್ತ ಧಾವಿಸತೊಡಗಿದರು.

kadabatimes.in
kadabatimes.in

ಪೊಲೀಸರು ಬೆನ್ನಟ್ಟಿದಾಗ ಅಣೆಕಟ್ಟಿನ ಹಿನ್ನೀರಿನಿಂದ ತುಂಬಿದ್ದ ನೇತ್ರಾವತಿ ನದಿಗೆ ಧುಮುಕಿದ್ದಾನೆ. ಮಾತ್ರವಲ್ಲದೆ ನದಿಯ ಮಧ್ಯಭಾಗಕ್ಕೆ ಹೋಗಿ ತನ್ನನ್ನು ಹಿಡಿಯುವಂತೆ ಪೊಲೀಸರಿಗೆ ಸವಾಲು ಕೂಡ ಹಾಕಿದ್ದಾನೆ ಎನ್ನಲಾಗಿದೆ.

kadabatimes.in

ಜಾತ್ರೆಯ ಜನ ಜಂಗುಳಿಯಲ್ಲಿ ಅನಪೇಕ್ಷಿತ ಘಟನಾವಳಿಗೆ ಅವಕಾಶವಾಗಬಾರದೆಂಬ ಕಾರಣಕ್ಕೆ ಸ್ಥಳದಲ್ಲಿ ಮೌನಕ್ಕೆ ಜಾರಿದ್ದ ಪೊಲೀಸರು ಆತ ದಡ ಸೇರಬಹುದೆಂಬ ಸಾಧ್ಯತೆಯ ಅಯಕಟ್ಟಿನ ಪ್ರದೇಶದಲ್ಲಿ ನಿಗಾ ಇರಿಸಿದರಾದರೂ ಆತ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಈ ಘಟನೆ ಕೆಲ ಹೊತ್ತು ಕುತೂಹಲಕ್ಕೆ ಕಾರಣವಾಗಿದ್ದು   ಕೂಲಂಕಷವಾಗಿ ಪರಿಶೀಲಿಸಿದಾಗ ನದಿಗೆ ಹಾರಿದಾತನ  ಅಸಲಿತನ ಬಯಲಾಗಿದೆ.