23.9 C
Kadaba
Sunday, March 23, 2025

ಹೊಸ ಸುದ್ದಿಗಳು

ಸುಬ್ರಹ್ಮಣ್ಯ: ಅರಣ್ಯ ಪ್ರದೇಶದಲ್ಲಿ ಕೊಳವೆಬಾವಿ ಕೊರೆದು ಸೋಲಾರ್ ಪಂಪ್ ಅಳವಡಿಕೆಗೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಆಕ್ಷೇಪ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕುಕ್ಕೆ ಸುಬ್ರಹ್ಮಣ್ಯ(KADABA TIMES) : ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯುವುದಕ್ಕೆ ಹಾಗೂ  ಸೋಲಾರ್ ಪಂಪ್ ಅಳವಡಿಕೆಗೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ  ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

kadabatimes.in

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಚಾಲಕ ಕಿಶೋರ್ ಶಿರಾಡಿ ಅವರು, ಪಶ್ಚಿಮ ಘಟ್ಟ ದಟ್ಟ ಕಾಡಿನಲ್ಲಿ ಬೇಸಿಗೆಯಲ್ಲಿ ನೀರಿನ ಅಂಶ ಕಡಿಮೆ ಇದೆ, ಆಹಾರ ಕೂಡ ಕ್ಷೀಣಿಸಿದೆ, ಇದರಿಂದಾಗಿ ಕಾಡುಪ್ರಾಣಿಗಳಿಗೆ ನೀರು ಆಹಾರವನ್ನು ಅರಿಸಿಕೊಂಡು ನಾಡಿಗೆ ಬರುತ್ತಿರುವುದು ಸಾಮಾನ್ಯವಾಗಿದೆ. ಆದುದರಿಂದ ಕೊಳವೆಬಾವಿ ಕೊರೆದು ಸೋಲಾರ್ ಪಂಪು ಮೂಲಕ ನೀರನ್ನು  ಶೇಖರಿಸಿ ವನ್ಯಜೀವಿಗಳಿಗೆ  ಜೀವಿಸಲು ಅನುಕೂಲ ಮಾಡಿಕೊಡಬೇಕೆಂದು ಅರಣ್ಯ ಮಂತ್ರಿಗಳು ಅರಣ್ಯ ಇಲಾಖೆಗೆ ನೀಡಿದ ಆದೇಶವು ಅವೈಜ್ಞಾನಿಕವಾಗಿದೆ.

kadabatimes.in

ಪಶ್ಚಿಮ ಘಟ್ಟ ಪ್ರದೇಶ ವಿಶಾಲವಾಗಿ ಹಬ್ಬಿ ದಟ್ಟ ಕಾನನದಿಂದ ಕೂಡಿದ್ದು ಸ್ವಚ್ಛಂದವಾದ ಗಾಳಿ ಪಡೆಯುತ್ತಿದ್ದೇವೆ.  ಪ್ರಾಣಿಗಳಿಗೆ ನೀರು ಕುಡಿಯಲು ಸಮರ್ಪಕ  ನೀರು , ಆಹಾರ ಇಲ್ಲ ಹಾಗೂ ನೀರಿಗಾಗಿ ಆಹಾರಕ್ಕಾಗಿ ನಾಡಿಗೆ ಬರುತ್ತವೆ ಎನ್ನುವ ನೆಪ ಒಡ್ಡಿ ದಟ್ಟ ಅರಣ್ಯದಲ್ಲಿ ಕೊಳವೆ ಬಾವಿ ಕೊರೆಯಲು ಹಾಗೂ ಸೋಲಾರ್ ಪಂಪ್ ಅಳವಡಿಸಲು ಮುಂದಾಗಿದೆ.

kadabatimes.in

ಅರಣ್ಯ ಮಂತ್ರಿಗಳು ಈಗಾಗಲೇ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಈ ಬಗ್ಗೆ ಆದೇಶ ಕೂಡ ನೀಡಿದ್ದಾರೆ.  ಇಂತಹ ದುಸ್ಸಾಹಸಕ್ಕೆ ರಾಜ್ಯ ಸರ್ಕಾರವು ಕೈ ಹಾಕಿದಲ್ಲಿ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯಲು ಮುಂದಾದಲ್ಲಿ ಅರಣ್ಯ ಪರಿಸರ  ಬರಿದಾಗುವ ಹಾಗೂ ಧಕ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ  ಈ ಆದೇಶವನ್ನು ಸರ್ಕಾರವು  ಕೂಡಲೇ ಕೈ ಬಿಡಬೇಕೆಂದು  ಆಗ್ರಹಿಸಿದ್ದಾರೆ.

kadabatimes.in

ಸುದ್ದಿಗೋಷ್ಠಿಯಲ್ಲಿ ಮಾಲೆನಾಡು ಜನ ಹಿತ ರಕ್ಷಣಾ ವೇದಿಕೆ ಸದಸ್ಯರುಗಳಾದ ಅತ್ಯುತ್ತ ಗೌಡ ಸುಬ್ರಹ್ಮಣ್ಯ ,ಅಶೋಕ್ ಕುಮಾರ್ ಮೂಲೆಮಜಲು, ಜಯಪ್ರಕಾಶ್ ಕೂಜುಗೋಡು, ಚಂದ್ರಶೇಖರ ಬಾಳುಗೋಡು, ಚಂದ್ರಹಾಸ ಶಿವಾಲ, ರಮಾನಂದ ಎಣ್ಣೆ ಮಜಲು, ರಾಜೇಶ್ ಕೊಣಜೆ ,ಹಾಗೂ ದುಶ್ಚಂತ್ ಉಪಸ್ಥಿತರಿದ್ದರು.