26.1 C
Kadaba
Wednesday, April 23, 2025

ಹೊಸ ಸುದ್ದಿಗಳು

ಜಾತ್ರೆಯಲ್ಲಿ ತೇರು ಉರುಳಿ ಬಿದ್ದು ಅವಘಡ:ಓರ್ವ ಮೃ*ತ್ಯು,ಕಂಗಾಲಾದ ಭಕ್ತ ಸಮೂಹ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಕ್ಷೇಪಾರ್ಹ, ಅಥವಾ ತಪ್ಪು ಮಾಹಿತಿಗಳು  ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್, (KADABA TIMES): ಭಾರಿ ಗಾಳಿಯಿಂದಾಗಿ ಭಾರೀ ಎತ್ತರದ ತೇರು(ಕುರ್ಜು) ಉರುಳಿ ಬಿದ್ದು ಅವಘಡ ಸಂಭವಿಸಿದ ಘಟನೆ  ಬೆಂಗಳೂರು ಹೊರವಲಯದ ಆನೇಕಲ್ ನ ಹುಸ್ಕೂರಿನ ಗ್ರಾಮ ದೇವತೆ ಮದ್ದೂರಮ್ಮ ಜಾತ್ರೆಯಲ್ಲಿ ನಡೆದಿದೆ.

kadabatimes.in

ಮಾ.22ರಂದು ಸಂಜೆ ಈ ಅವಘಡ ನಡೆದಿದ್ದು ಜಾತ್ರೋತ್ಸವಕ್ಕೆ ಭಾರಿ ಸಂಖ್ಯೆಯ ಜನರು ಸೇರಿದ್ದ ವೇಳೆಯೇ ತೇರು ಗಾಳಿಯ ರಭಸಕ್ಕೆ ನಿಯಂತ್ರಣಕ್ಕೆ ಸಿಗದೇ ಏಕಾಏಕಿ ಉರುಳಿ ಬಿದ್ದಿದೆ. ಅವಘಡದಲ್ಲಿ ಓರ್ವ ವ್ಯಕ್ತಿ ಸಾ*ವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ

kadabatimes.in

ಮೃ*ತ ದುರ್ದೈವಿ ತಮಿಳುನಾಡಿನ ಹೊಸೂರು ಮೂಲದವರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡ ನಡೆದ ಬಳಿಕ ಜನರು ಕಂಗಾಲಾಗಿದ್ದಾರೆ. ಧಾರ್ಮಿಕ ಕಾರ್ಯದ ವೇಳೆ ಕುರ್ಜು ಮಗುಚಿ ಬಿದ್ದದ್ದು ಭಕ್ತರನ್ನು ತೀವ್ರ ಚಿಂತೆಗೀಡು ಮಾಡಿದೆ.

kadabatimes.in

ನಾಗಮಂಗಲ ಮತ್ತು ರಾಯಸಂದ್ರ ಗ್ರಾಮದ ಭಕ್ತರು ಕುರ್ಜು ನಿರ್ಮಾಣ ಮಾಡಿ ತಂದಿದ್ದರು ಎಂದು ತಿಳಿದು ಬಂದಿದೆ. ಕುರ್ಜು ಗಳನ್ನು ಭಕ್ತರು ಪೈಪೋಟಿಗೆ ಬಿದ್ದಂತೆ ಎತ್ತರ ಮಾಡುತ್ತಾ ಹೋಗುವುದು ಅವಘಡಕ್ಕೆ ಕಾರಣವಾಗಿದೆ ಎನ್ನಲಾಗಿದೆ.

kadabatimes.in

ಕುರ್ಜು ನಿರ್ಮಾಣ ಮಾಡಿ ಕಿಲೋ ಮೀಟರ್ ಗಳಷ್ಟು ದೂರ ಸಾಂಪ್ರದಾಯಿಕವಾಗಿ ಎತ್ತುಗಳು, ಟ್ರ್ಯಾಕ್ಟರ್ ಗಳನ್ನೂ ಬಳಸಿ ಎಳೆದು ತರಲಾಗುತ್ತದೆ.ಕಳೆದ ವರ್ಷವೂ ಪಕ್ಕದ ಹೀಲಲಿಗೆ ಗ್ರಾಮದ ಕುರ್ಜು ಧರೆಗೆ ಉರುಳಿತ್ತು ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ .

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.