ಪುತ್ತೂರು: ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವ ದಾರಿ ಕೇಳುವ ನೆಪದಲ್ಲಿ ಮನೆಯಂಗಳದಲ್ಲಿದ್ದ ವೃದ್ಧರೊಬ್ಬರ ಕೈಬೆರಳಲ್ಲಿದ್ದ ಚಿನ್ನದ ಉಂಗುರ ದೋಚಿ ಪರಾರಿಯಾದ ಘಟನೆ ಮಾ.11ರ ತಡರಾತ್ರಿ ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು (ಬಡಕಾಯ್ದೆ) ಎಂಬಲ್ಲಿ ನಡೆದಿದೆ.


ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು(ಬಡಕಾಯ್ದೆ) ಸತೀಶ್ ರೈ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರ ಸಂಬಂಧಿಕರೊಬ್ಬರು ತಡ ರಾತ್ರಿ ಸಿಟೌಟ್‌ನಲ್ಲಿ ಕುಳಿತ್ತಿದ್ದ ಸಂದರ್ಭ, ಬೈಕ್‌ನಲ್ಲಿ ಬಂದ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬರು ಆನಡ್ಕಕ್ಕೆ ಹೋಗುವ ದಾರಿ ಯಾವುದೆಂದು ಕೇಳಿ ವೃದ್ದರನ್ನು ಅಂಗಳಕ್ಕೆ ಕರೆಸಿ ಅವರ ಕೈ ಬೆರಳಲ್ಲಿದ್ದ ಚಿನ್ನದ ಉಂಗುರವನ್ನು ದೋಚಿ ಪರಾರಿಯಾಗಿದ್ದಾರೆ.




ಚಡ್ಡಿ ಹಾಕಿಕೊಂಡಿದ್ದ ವ್ಯಕ್ತಿ ತುಳುವಿನಲ್ಲೇ ದಾರಿಯನ್ನು ಕೇಳಿದ್ದಾರೆ ಎಂದು ಮನೆ ಮಂದಿ ತಿಳಿಸಿದ್ದಾರೆ. ತಡ ರಾತ್ರಿ ಪುತ್ತೂರು ಪೊಲೀಸರು ಮನೆಗೆ ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆಂದು ತಿಳಿದು ಬಂದಿದೆ.

