ಕಡಬ ಟೈಮ್, ಪ್ರಮುಖ ಸುದ್ದಿ: ಫರಂಗಿಪೇಟೆಯ ಅಮೆಮ್ಮಾರ್ ಕಿದೆಬೆಟ್ಟು ನಿವಾಸಿ ದಿಗಂತ್ ನಾಪತ್ತೆಯಾಗಿ ಇಂದಿಗೆ ಹನ್ನೊಂದು ದಿವಸ ಕಳೆದರೂ ಈವರೆಗೆ ಯಾವುದೇ ಸುಳಿವು ಸಿಗಲಿಲ್ಲ.


ಈ ನಿಟ್ಟಿನಲ್ಲಿ ದಿಗಂತ್ ನನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ಶೋಧ ಕಾರ್ಯ ಮುಂದುವರಿಸಿದ್ದು, ಮಾ.8ರಂದು ಶನಿವಾರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್.ನೇತೃತ್ವದ ಸುಮಾರು 150 ರಷ್ಟಿರುವ ಜಿಲ್ಲಾ ಪೋಲೀಸ್ ತಂಡ ಫರಂಗಿಪೇಟೆ ಸುತ್ತಮುತ್ತಲಿನ ಸ್ಥಳದ ಪ್ರದೇಶಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಕೂಂಬಿಂಗ್ (ಶೋಧ) ಕಾರ್ಯ ಆರಂಭಿಸಿದ್ದರು




ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, “ಅಗ್ನಿ ಶಾಮಕ ದಳ, ಡ್ರೋನ್, ಶ್ವಾನ ದಳ ಸೇರಿದಂತೆ ಜಿಲ್ಲೆಯ ಸುಮಾರು 150ರಷ್ಟು ಪೊಲೀಸ್ ತಂಡಗಳನ್ನು ರಚಿಸಿ ದಿಗಂತ್ ಪತ್ತೆಗಾಗಿ ಶನಿವಾರ ಕೂಂಬಿಂಗ್ ನಡೆಸಲಾಗಿದೆ. ಪೊಲೀಸ್ ಇಲಾಖೆ ಶಕ್ತಿ ಮೀರಿ ಈ ಪ್ರಕರಣವನ್ನು ಭೇದಿಸಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದರು.


ಮಹತ್ವದ ಬೆಳವಣಿಗೆಯಲ್ಲಿ ನಾಪತ್ತೆಯಾಗಿದ್ದ ದಿಗಂತ್ ಇದೀಗ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಪಶ್ಚಿಮ ವಲಯ ಐಜಿ ಅಮಿತ್ ಸಿಂಗ್ ಮಾರ್ಗದರ್ಶನದಲ್ಲಿ ಜಿಲ್ಲಾ ಎಸ್.ಪಿ ಯತೀಶ್ ನೇತೃತ್ವದಲ್ಲಿ ದಿಗಂತ್ ಪತ್ತೆಗಾಗಿ ಏಳು ತಂಡಗಳನ್ನು ಕಳೆದ ಎರಡು ದಿನಗಳಿಂದ ತನಿಖೆಯನ್ನು ತೀವ್ರಗೊಳಿಸಿದ್ದ ಪೊಲೀಸರು ಕೊನೆಗೂ ಯುವಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.