ಕಡಬ,ಪ್ರಮುಖ ಸುದ್ದಿ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಡ್ಡಗದ್ದೆ ಎಂಬಲ್ಲಿ ಸ್ಥಳೀಯಾಡಳಿತದ ಅನುಮತಿ ಪಡೆಯದೆ ರಾತ್ರಿ ವೇಳೆ ಟಿಪ್ಪರ್ ನಲ್ಲಿ ಮಣ್ಣು ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಮಾಹಿತಿ ಸಂಗ್ರಹಿಸಲು ಹೋದ ವೆಬ್ ನಿರ್ವಾಹಕನ ವಿರುದ್ದ ಲಾರಿ ಚಾಲಕ ನೀಡಿದ ದೂರಿನಂತೆ ಜೀವಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.


ಮಾ .4 ರ ರಾತ್ರಿ ರಾಮಣ್ಣ ಎಂಬವರ ಜಾಗದಿಂದ ಮಣ್ಣು ತುಂಬಿಸಿ ಅಲ್ಲಿಂದ ದೇವಸ್ಥಾನದ ಬಳಿ ಮಣ್ಣು ಹಾಕಿ ರಸ್ತೆಯಲ್ಲಿ ಹೋಗುವ ಸಂದರ್ಭ ಲಾರಿ ತಡೆದು ನಿಲ್ಲಿಸಿ ಗಣೇಶ್ ಇಡಾಳ ಪ್ರಶ್ನಿಸಿ , ನಿಮ್ಮ ಲಾರಿಯನ್ನು ಮುಂದೆ ಚಲಾಯಿಸಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ ಚಿದ್ಗಲ್ ನಿವಾಸಿ ಪ್ರವೀಣ್ ಕುಮಾರ್ ಎಂಬವರು ನೀಡಿ ದೂರಿಂತೆ ಪ್ರಕರಣ ದಾಖಲಾಗಿದೆ.




ಘಟನಾ ಸ್ಥಳಕ್ಕೆ ಗಸ್ತು ನಿರತ ಪೊಲೀಸರು ಆಗಮಿಸಿ ಪರಿಶೀಲಿಸಿದ್ದರು ಈ ವೇಳೆ ವಾಗ್ವಾದವೂ ನಡೆದಿತ್ತು. ಬಳಿಕ ಠಾಣೆಗೆ ಕರೆಸಲಾಗಿತ್ತು.


ಇತ್ತೀಚೆಗೆ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ತೆರೆದ ಟಿಪ್ಪರ್ ನಲ್ಲಿ ಮಣ್ಣು ಸಾಗಾಟದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ನಂತರ ಬೆಳವಣಿಗೆಯಲ್ಲಿ ಟಿಪ್ಪರ್ ಮಾಲಕರೊಬ್ಬರು ಟಿಪ್ಪರ್ ಅಡಿಗೆ ಹಾಕಿ ಎಂಬ ಬೆದರಿಕೆ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ನ್ಯೂಸ್ ಅಪ್ಡೇಟ್ ವೆಬ್ ನಿರ್ವಾಹಕ ಗಣೇಶ್ ಇಡಾಳ ಅವರು ಆಡಿಯೋ ಸಹಿತ ಠಾಣೆಗೆ ದೂರು ನೀಡಿದ್ದರು. ಮಣ್ಣು ಸಾಗಾಟ ಮತ್ತೆ ಮುಂದುವರಿದ ಹಿನ್ನೆಲೆ ಮಣ್ಣು ತೆಗೆಯುತ್ತಿದ್ದ ಸ್ಥಳಕ್ಕೆ ತೆರಳಿ ವಿಚಾರಿಸಿದ್ದರು ಎನ್ನಲಾಗಿದೆ.