ಕಡಬ ಟೈಮ್, ಪ್ರಮುಖ ಸುದ್ದಿ: ಆಶಾಕಾರ್ಯಕರ್ತೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಮಾನ್ಯ ನ್ಯಾಯಾಲಯದ ಆದೇಶದಂತೆ ಪೊಲೀಸರು ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.


2024ರ ಅಕ್ಟೋಬರ್ 21 ರಂದು ಆಶಾಕಾರ್ಯಕರ್ತೆಯಾಗಿರುವ ಶ್ರೀ ಮತಿ ರಾಜೀವಿ ಎಂಬವರು ತನಗೆ ಆಗಿರುವ ತೊಂದರೆ ಬಗ್ಗೆ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಅಸಂಜ್ಞೆಯ ಪ್ರಕರಣವೆಂದು ಪರಿಗಣಿಸಿ ದೂರು ಸ್ವೀಕರಿಸಿ ಹಿಂಬರಹ ನೀಡಿದ್ದರು.






ಇದೀಗ ದೂರನ್ನು ದಾಖಲಿಸಿಕೊಂಡು ತನಿಖೆ ಮಾದುವಂತೆ ಪುತ್ತೂರು ಜೆ.ಎಂಎಫ್.ಸಿ ಮತ್ತು2 ನೇ ಎಸಿಜೆ ನ್ಯಾಯಾಲಯವು ಆದೇಶ ಮಾಡಿದೆ. ಅಮಲು ಸೇವಿಸಿ ಅವಾಚ್ಯ ಶಬ್ದಗಳಿಂದ ಬೈದು ನೀವು ಇಲ್ಲಿಂದ ಜಾಗ ಬಿಟ್ಟು ಹೋಗಬೇಕು, ಇಲ್ಲದಿದ್ದರೆ ನಿಮ್ಮನ್ನು ಮುಗಿಸುತ್ತೆವೆ ಎಂದು ಬೆದರಿಕೆ ಹಾಕಿದ ಆರೋಪದ ಮೇರೆಗೆ ಕುಟ್ರುಪ್ಪಾಡಿಯ ಉಳಿಪ್ಪು ನಿವಾಸಿಗಳಾದ ಜಿನ್ನಪ್ಪ ಗೌಡ, ಚಂದ್ರಶೇಖರ ಗೌಡ, ಅಚ್ಚುತ್ತ ಗೌಡ ಅವರುಗಳ ವಿರುದ್ದ ಪ್ರಕರಣ ದಾಖಲಾಗಿದೆ.