33.3 C
Kadaba
Saturday, March 15, 2025

ಹೊಸ ಸುದ್ದಿಗಳು

ಕಡಬ:ಕೊಯಿಲ ಬಳಿ ಅಕ್ರಮ ದನ ಸಾಗಾಟ ಮಾಡಿ ಪರಾರಿ ಪ್ರಕರಣ: ಆರೋಪಿ ಕೊನೆಗೂ ಠಾಣೆಯಲ್ಲಿ ಶರಣು

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

 ಕಡಬ ಟೈಮ್,ಆಲಂಕಾರು: ಕಡಬ ಠಾಣೆ ವ್ಯಾಪ್ತಿಯ ಕೊಯಿಲ  ಗ್ರಾಮದ ಪರಂಗಾಜೆ ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು .14 ರಂದು  ಕಡಬ ಪೊಲೀಸರು ತಡೆದು ಅದರಲ್ಲಿದ್ದ ಗೋವುಗಳನ್ನು ರಕ್ಷಿಸಿದ್ದರು.  ಸುಮಾರು ಐದು ದನಗಳು ಹಿಂಸಾತ್ಮಕವಾಗಿ ಕಟ್ಟಿ ಹಾಕಿದ ಪರಿಣಾಮ ಕೆಲ ದಿನಗಳ ಅಸ್ವಸ್ಥಗೊಂಡು ಮೃತಪಟ್ಟಿದ್ದವು.

kadabatimes.in

ಬೆನ್ನಲ್ಲೇ  ಹಿಂದೂ ಪರ ಸಂಘಟನೆಗಳು ಅಕ್ರಮ ಜಾನುವಾರು ಸಾಗಾಟದ ವಿರುದ್ದ ಪ್ರತಿಭಟನೆ ಮಾಡಿದರೂ ಆರೋಪಿ ಬಂಧನವಾಗದ ಬಗ್ಗೆ ಮೌನವಹಿಸಿದ್ದವು. ಇದೀಗ ಬರೊಬ್ಬರಿ  47 ದಿನಗಳ ಬಳಿಕ ಈ ಪ್ರಕರಣದ ಪ್ರಮುಖ ಆರೋಪಿಯೋರ್ವ  ಠಾಣೆಗೆ ಶರಣಾಗಿದ್ದಾನೆ.

kadabatimes.in

ಮಂಗಳೂರು ಹೊರ ವಲಯದ  ಉಳ್ಳಾಲದ ಹನಿಫ್ ಎಂಬಾತ ಮಾ.1 ರಂದು  ಕಡಬ ಠಾಣೆಗೆ ಹಾಜರಾಗಿ ಪೊಲೀಸರ ಮುಂದೆ ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. . ಈತನ ಜೊತೆಗೆ ಬಾಡಿಗೆಗಾಗಿ ವಾಹನ ನೀಡಿದಾತನೂ ಆಗಮಿಸಿದ್ದು ಹಲವು ಮಾಹಿತಿಗಳನ್ನು ಪೊಲಿಸರು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

kadabatimes.in

ಬಂಧನದ ಭೀತಿಯಲ್ಲಿದ್ದ  ಆರೋಪಿ ಮೊದಲು  ಸ್ಥಳೀಯರ ನೆರವು ಪಡೆದು ಘಟನಾ ಸ್ಥಳದಿಂದ ಪರಾರಿಯಾಗಿದ್ದ .ಪೊಲೀಸರು ಉಳ್ಳಾಲಕ್ಕೆ ತೆರಳಿ ಬಂಧಿಸಲು ಯತ್ನಿಸಿದರೂ ಅಲ್ಲಿದ್ದ ಪರಾರಿಯಾಗಿದ್ದ.   ಬಳಿಕ ಕೇರಳ ಮತ್ತು ಇತರ ಸ್ಥಳಗಳಲ್ಲಿ  ಓಡಾಟ ಮಾಡಿದ್ದ. ಇದರ ನಡುವೆ ಜಾಮೀನು ಪಡೆಯಲು ಯತ್ನಿಸಿರುವುದಾಗಿ ಮಾಹಿತಿ ಲಭಿಸಿದೆ.

kadabatimes.in

ಅಕ್ರಮ ದನ ಸಾಗಾಟದ  ವಾಹನವನ್ನು ಕೊಯಿಲ ಬಳಿಯ   ಕುದುರುಲು ಎಂಬಲ್ಲಿ ಪೊಲೀಸರು ಮೊದಲು  ಪತ್ತೆ ಹಚ್ಚಿದ್ದರು.  ಬಳಿಕ   ಸಂಕೇಶ ಹಾಲಿನ  ಡಿಪ್ಪೊ ಬಳಿ  ಮಹಜ ನಡೆಸಲಾಗಿತ್ತು . ಠಾಣೆಯಲ್ಲಿ ದಾಖಲಾದ ಎಫ್..ಆರ್ ನಲ್ಲಿ   ಪರಂಗಾಜೆ ಎಂಬಲ್ಲಿನ ಹೆಸರು   ಉಲ್ಲೇಖಗೊಂಡ ಕಾರಣ ಸ್ಥಳೀಯಲ್ಲಿ ಚರ್ಚೆಗೆ ಕಾರಣವಾಗಿತ್ತು .