25.1 C
Kadaba
Friday, March 14, 2025

ಹೊಸ ಸುದ್ದಿಗಳು

ಹಲ್ಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ ಕಡಬ ಪೊಲೀಸರು

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್, ಕ್ರೈಂ ಸುದ್ದಿ: ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ  ಆರೋಪಿಯೊಬ್ಬನನ್ನು ಕಡಬ ಪೊಲೀಸರು ಬಂಧಿಸಿದ್ದು ಮಾನ್ಯ  ನ್ಯಾಯಾಲಯವು  ನ್ಯಾಯಾಂಗ ಬಂಧನ ವಿಧಿಸಿದೆ.

kadabatimes.in

2010ರ ಎಪ್ರಿಲ್  15  ರಂದು ಸವಣೂರು ಪೇಟೆಯಲ್ಲಿ ಅಟ್ಟೋಳೆಯ  ಶೇಷಪ್ಪ ಎಂಬವರಿಗೆ ತಂಡವೊಂದು ಹಲ್ಲೆ ಮಾಡಿತ್ತು.ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿದರೂ ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದ.

kadabatimes.in

ಇದೀಗ ಹದಿಮೂರು ವರ್ಷಗಳ ಬಳಿಕ ತಲೆ ಮರೆಸಿಕೊಂಡಿದ್ದ   ಪಡ್ನೂರು ಗ್ರಾಮದ ನೆಲಪಾಲ ನಿವಾಸಿ ಶ್ರೀಷ ಎಂಬಾತನನ್ನು ಕಡಬ ಪೊಲೀಸರು ಮಂಗಳೂರಿನ ಸೂರತ್ಕಲ್ ನಿಂದ ಬಂಧಿಸಿದ್ದಾರೆ.

kadabatimes.in

ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್  ನಿರ್ದೇಶನದಂತೆ   ಠಾಣಾ ಎಸೈಗಳಾದ  ಅಭಿನಂದನ್, ಅಕ್ಷಯ್ ಡವಗಿ ಅವರ  ಆದೇಶದಂತೆ   ಸಿಬ್ಬಂದಿಗಳಾದ ರಾಜು ನಾಯಕ್ , ಪ್ರವೀಣ್,  ಇಸಾಕ್  ವಾರೆಂಟ್ ಆರೋಪಿಯ ಬಂಧನದ ತಂಡದಲ್ಲಿದ್ದರು.

kadabatimes.in

ಉಲ್ಲೇಖ:  ಕಡಬ ಪೊಲೀಸ್ ಠಾಣಾ LPC No 03/2019  ಹಾಗೂ Crime no 56/2010 , ಕಲಂ-341,323 IPC ಮಾನ್ಯ ACJ & JMFC ಪುತ್ತೂರು ನ್ಯಾಯಾಲಯ  ಹಾಗೂ CC NO 1582/2012 ರಲ್ಲಿ LPC ವಾರೆಂಟ್ ಹೊರಡಿಸಲಾಗಿತ್ತು