25.2 C
Kadaba
Saturday, March 15, 2025

ಹೊಸ ಸುದ್ದಿಗಳು

ಆಲಂಕಾರಿನಲ್ಲಿ ಬಿಜೆಪಿಯ ಎರಡು ಬಣಗಳ ನಡುವೆ ಮಾತಿನಚಕಮಕಿ: ಪೊಲೀಸ್ ಎಂಟ್ರಿ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್ಸ್, ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ (ಮಾ.2) ಇಂದು ಚುನಾವಣೆ ನಡೆಯುತ್ತಿದ್ದು,ಈ ಸಂದರ್ಭ ಬಿಜೆಪಿಯ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.

kadabatimes.in

ಮತದಾರರನ್ನು ಚುನಾವಣಾ ಕೇಂದ್ರಕ್ಕೆ ಕರೆ ತರುವ ಸಂಧರ್ಭದಲ್ಲಿ ಸಹಕಾರಿ ಭಾರತಿಯ ಬಣ ಮತ್ತು ರಮೇಶ ಭಟ್ ಸಹಕಾರಿ ಬಳಗದ ಮಧ್ಯೆ ಚಿಹ್ನೆಯ ಚೀಟಿ ಹಂಚುವಿಕೆಯ ವಿಚಾರವಾಗಿ ಪರಸ್ಪರ ಮಾತಿನ ಚಕಮಕಿ ನಡೆದಿರುವುದಾಗಿದೆ.

kadabatimes.in

 

kadabatimes.in

ಪೋಲಿಸರು ಮದ್ಯಪ್ರವೇಶಿಸದೆ ಇರುತ್ತಿದ್ದರೆ ಇತ್ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟದ ಹಂತಕ್ಕೆ ತಲುಪುತ್ತಿತ್ತು ಎಂದು ಅಲ್ಲಿ ನೆರೆದಿದ್ದವರು ತಿಳಿಸಿದ್ದಾರೆ.ಸದ್ಯ ಪೊಲೀಸರ ಖಡಕ್ ಎಂಟ್ರಿಯಿಂದ
ಪರಿಸ್ಥಿತಿ ಶಾಂತಗೊಂಡಿದೆ.

kadabatimes.in

12 ಸ್ಥಾನಕ್ಕೆ 24 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 2470 ಮತಗಳಿದ್ದು ಮಧ್ಯಾಹ್ನ ವೇಳೆಗೆ ಅಂದಾಜು 50% ಮತದಾನ ನಡೆದಿದೆ. ಚುನಾವಣೆ ಮುಗಿದ ಅಂತಿಮ ಬಳಿಕ ಚುನಾವಣಾ ಏಣಿಕೆ ನಡೆದು ಪಲಿತಾಂಶ ಪ್ರಕಟಗೊಳ್ಳಲಿದ್ದು, ಅಂತಿಮ ವಿಜಯದ ಮಾಲೆ ಯಾರ ಪಾಲಿಗೆ ಎಂದು ಕಾದು ನೋಡಬೇಕಾಗಿದೆ.