ಕಡಬ ಟೈಮ್, ಮರ್ದಾಳ :ಉಪ್ಪಿನಂಗಡಿ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಬಳಿ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು ಸವಾರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಫೆ.25 ರಂದು ನಡೆದಿದೆ.


ಕಲ್ಲಾಜೆ ಬಳಿ ಈ ಅಪಘಾತದಲ್ಲಿ ಐತ್ತೂರು ಗ್ರಾ.ಪಂ ಸದಸ್ಯ ಮನಮೋಹನ್ ಗೊಳ್ಯಾಡಿ ಅವರು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಸ್ಕೂಟಿ ಸವಾರರಾದ ಕಲ್ಲುಗುಂಡಿಯ ಶೋಭಾ ಮತ್ತು ಹರ್ಷ ಎಂಬವರು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.


ಸ್ಕೂಟಿ ಸವಾರೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ತನದಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲಬದಿಗೆ ಬಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ ಎನ್ನಲಾಗಿದೆ.


ಸ್ಥಳೀಯರಾದ ಸುದೀರ್ ಕುಮಾರ್ ಶೆಟ್ಟಿ ಮತ್ತು ಹರಿಶ್ಚಂದ್ರ ಕಳಿಗೆ ಸೇರಿಂದಂತೆ ಸ್ಥಳದಲ್ಲಿದ್ದವರು ಗಾಯಾಳುಗಳನ್ನು ಉಪಚರಿಸಿ ಎಸ್‌ಕೆಎಸ್‌ಎಸ್‌ಎಫ್ ಅಂಬ್ಯಲೆನ್ಸ್ ಮತ್ತು 108 ತುರ್ತು ವಾಹನದ ಮೂಲಕ ಸಕಾಲಕ್ಕೆ ಆಸ್ಪತ್ರೆಗೆ ತಲುಪಿಸಿದ್ದಾರೆ.


ಬಿಳಿನೆಲೆಯ ಸತೀಶ್ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪೊಲೀಸ್ ಠಾಣಾ ಅ.ಕ್ರ 11/2025 ಕಲಂ 281,125(a) BNS-2023 ಯಂತೆ ಪ್ರಕರಣ ದಾಖಲಾಗಿದೆ.