ಕಡಬ ಟೈಮ್ಸ್, ಪ್ರಮುಖ ಸುದ್ದಿ: ಭಾರಿ ಸುಡು ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಗ್ರಾಮೀಣ ಭಾಗದ ಜನರಿಗೆ ಶನಿವಾರ ಸಂಜೆ ಸುರಿದ ಮೊದಲ ತುಂತುರು ಮಳೆ ಕೆಲ ಹೊತ್ತು ತಂಪೆರೆದಿದೆ.


ಕಡಬ ಸಹಿತ ಮರ್ದಾಳ, ಸುಬ್ರಹ್ಮಣ್ಯ, ಪಂಜ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದೆ. ದಿಢೀರ್ ಮಳೆಯಿಂದ ಕೆಲ ಕೃಷಿಕರು ಅಂಗಳದಲ್ಲಿ ಒಣಗಲು ಹಾಕಿದ್ದ ಅಡಕೆಯನ್ನು ರಾಶಿ ಮಾಡಿ ಮುಚ್ಚಲು ಮುಂದಾಗಿರುವುದು ಕಂಡು ಬಂದಿದೆ.






ಅಪರೂಪ ಮಳೆಯಿಂದ ಕೆಲ ಹೊತ್ತು ತಂಪು ವಾತಾವರಣ ನಿರ್ಮಾಣವಾದರೂ ಸೆಕೆಯ ಪ್ರಮಾಣ ಅಧಿಕವಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ.