ಕಡಬ ಟೈಮ್, ಸುಳ್ಯ: ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಬಂದಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬ ಒಟ್ಟಿಗೆ ಕೆಲಸ ನಿರ್ವಹಿಸುತ್ತಿದ್ದವರ ಬಳಿಯಿದ್ದ ಬೆಲೆಬಾಳುವ ಮೊಬೈಲ್ ಫೋನ್ ಹಾಗೂ ಸುಮಾರು 50 ಸಾವಿರ ರೂ ಗಳನ್ನು ಕದ್ದು ಪರಾರಿಯಾದ ಘಟನೆ ಫೆ. 18 ರಂದು ಮುಂಜಾನೆ ಮಾವಿನಕಟ್ಟೆ ಸಮೀಪ ರಬ್ಬರ್ ತೋಟದಲ್ಲಿ ನಡೆದಿದೆ.


ಮಾವಿನಕಟ್ಟೆ ಬಳಿ ಕಲಂದರ್ ಎಂಬುವವರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಜಯನಗರ ನಿವಾಸಿ ಮಹಮ್ಮದ್ ಮುಟ್ಟೆತ್ತೋಡಿ ಎಂಬುವವರು ಹಣ ಹಾಗೂ ಮೊಬೈಲ್ ಫೋನ್ ಕಳೆದು ಕ್ಕೊಂಡವರಾಗಿದ್ದು ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.




ತೋಟದ ರೂಮಿನಲ್ಲಿ ಚಾರ್ಜಿಂ ಗಿಗಾಗಿ ಇಟ್ಟ ಮೊಬೈಲ್ ಫೋನ್ ಹಾಗೂ ಇವತ್ತು ಕೆಲಸದವರಿಗೆ ಸಂಬಳ ನೀಡಲು ತಂದಿದ್ದ ಅಂಗಿಯ ಜೇಬಿನಲ್ಲಿ ಇರಿಸಿದ್ದ ಸುಮಾರು 32 ಸಾವಿರ ಮೊತ್ತವನ್ನು ಕಳ್ಳ ತನ ಮಾಡಿದಲ್ಲದೆ ಅವರ ಫೋನ್ ಪೇ ಯಲ್ಲಿ ಇದ್ದ ಸುಮಾರು 17 ಸಾವಿರ ರೂ ವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿ ಫೋನ್ ಸಿಮ್ಮ್ ಕಳಚಿ ಇಟ್ಟು ಫೋನ್ ಹಾಗೂ ಹಣ ದೊಂದಿಗೆ ಪರಾರಿಯಾಗಿದ್ದಾನೆ ಎಂದು ಹಣ ಕಳೆದುಕೊಂಡ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಇವರೊಂದಿಗೆ ಕಳೆದ ಒಂದು ತಿಂಗಳಿನಿಂದ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ವ್ಯಕ್ತಿ ಅನಿಲ್ ಎಂಬಾತ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.