ಕಡಬ ಟೈಮ್, ಪ್ರಮುಖ ಸುದ್ದಿ: ಕಡಬ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ ಮಂಗಳವಾರ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಕಡಬ ತಾಲೂಕು ಕತ್ತಲಲ್ಲಿ ಮುಳುಗಿದೆ.


ದಿಢೀರ್ ವಿದ್ಯುತ್ ಕೈಕೊಟ್ಟ ಕಾರಣ ಕೃಷಿಕರು, ವ್ಯಾಪಾರಿಗಳು, ಮರದ ಮಿಲ್ ಸಹಿತ ಸಣ್ಣ ಪುಟ್ಟ ಉದ್ಯಮಿಗಳ ವ್ಯಾಪಾರ ವ್ಯವಹಾರಕ್ಕೆ ತೊಡಕು ಉಂಟಾಗಿದೆ.




ವಿದ್ಯುತ್ ಸರಬರಾಜು ಆಗುವ ಪ್ರಮುಖ ಲೈನ್ ನಲ್ಲಿ ಸಮಸ್ಯೆ ಉಂಟಾಗಿರುವುದಾಗಿ ತಿಳಿದು ಬಂದಿದ್ದು ಅಂದಾಜು11 ರ ಸುಮಾರಿಗೆ ಸಮಸ್ಯೆ ಬೆಗೆಹರಿಯಲಿದೆ ಎಂಬ ಮಾಹಿತಿ ಲಭಿಸಿದೆ.

