ಕಡಬ ಟೈಮ್ಸ್, ನೆಲ್ಯಾಡಿ:ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಾಲಕೃಷ್ಣ ಬಿ.ಬಾಣಜಾಲು, ಉಪಾಧ್ಯಕ್ಷರಾಗಿ ರವಿಚಂದ್ರ ಹೊಸವಕ್ಲು ಅವಿರೋಧ ಆಯ್ಕೆಯಾಗಿದ್ದಾರೆ


12 ನಿರ್ದೇಶಕ ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆದಿದೆ. ಈ ಪೈಕಿ 9 ಸ್ಥಾನಗಳಲ್ಲಿ ಸಹಕಾರ ಭಾರತಿ, 3 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಸಾಲಗಾರ 5 ಸಾಮಾನ್ಯ ಸ್ಥಾನಕ್ಕೆ ಸಹಕಾರ ಭಾರತಿಯ ರವಿಚಂದ್ರ ಹೊಸವಕ್ಲು ನೆಲ್ಯಾಡಿ, ಜಿನ್ನಪ್ಪ ಗೌಡ ಮಿತ್ತಪರಾಕೆ ಕೌಕ್ರಾಡಿ, ಜನಾರ್ದನ ಗೌಡ ಬರೆಮೇಲು ಶಾಂತಿನಗರ ಗೋಳಿತ್ತೊಟ್ಟು, ಸುಧಾಕರ ಗೌಡ ಬಿ ಬಾಗಿಲುಗದ್ದೆ ಶಿರಾಡಿ ಹಾಗೂ ಕಾಂಗ್ರೆಸ್ ಬೆಂಬಲಿತ ಸರ್ವೋತ್ತಮ ಗೌಡ ಹೊಸಮನೆ ಕೌಕ್ರಾಡಿ ಆಯ್ಕೆಯಾಗಿದ್ದಾರೆ.




ಸಾಲಗಾರ ಮಹಿಳಾ ಮೀಸಲು 2 ಸ್ಥಾನಕ್ಕೆ ಸಹಕಾರ ಭಾರತಿಯ ಶೇಷಮ್ಮ ಪೈಸಾರಿ ಇಚ್ಲಂಪಾಡಿ, ಕಾಂಗ್ರೆಸ್ ಬೆಂಬಲಿತ ಉಷಾ ಅಂಚನ್ ಕುಂಡಡ್ಕ ನೆಲ್ಯಾಡಿ, ಸಾಲಗಾರ ಹಿಂದುಳಿದ ವರ್ಗ ಎ ಮೀಸಲು 1 ಸ್ಥಾನಕ್ಕೆ ಸಹಕಾರ ಭಾರತಿಯ ಬಾಲಕೃಷ್ಣ ಬಿ.ಬಾಣಜಾಲು ಕೌಕ್ರಾಡಿ, ಸಾಲಗಾರ ಹಿಂದುಳಿದ ವರ್ಗ ಬಿ ಮೀಸಲು 1 ಸ್ಥಾನಕ್ಕೆ ಸಹಕಾರ ಭಾರತಿಯ ಜಯಾನಂದ ಪಿ ಬಂಟ್ರಿಯಾಲ್ ಕೆಳಗಿನ ಪರಾರಿ ನೆಲ್ಯಾಡಿ, ಸಾಲಗಾರ ಅನುಸೂಚಿತ ಜಾತಿ 1 ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಹರೀಶ್ ನುಜೂಲು ಗೋಳಿತ್ತೊಟ್ಟು, ಸಾಲಗಾರ ಅನುಸೂಚಿತ ಪಂಗಡ 1 ಸ್ಥಾನಕ್ಕೆ ಸಹಕಾರ ಭಾರತಿಯ ಬಾಬು ನಾಯ್ಕ್ ಅಲಂಗಪ್ಪೆ ಆಲಂತಾಯ ಹಾಗೂ ಸಾಲಗಾರರಲ್ಲದ 1 ಸ್ಥಾನಕ್ಕೆ ಸಹಕಾರ ಭಾರತಿಯ ಭಾಸ್ಕರ ರೈ ತೋಟ ಕೊಣಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಂಗಳೂರು ಉಪವಿಭಾಗ ಮಂಗಳೂರು ಇಲ್ಲಿನ ಅಧೀಕ್ಷಕರಾದ ಬಿ.ನಾಗೇಂದ್ರ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ದಕ್ಷಿಣ ಕನ್ನಡ ಸಹಕಾರಿ ಸಂಘದ ನಿರ್ದೇಶಕರಾದ ಶಶಿಕುಮಾರ್ ಬಾಲ್ಯೊಟು, ನಿಕಟ ಪೂರ್ವ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಪಟ್ಟೆ, ನಿಕಟಪೂರ್ವ ಉಪಾಧ್ಯಕ್ಷರಾದ ಕಮಲಾಕ್ಷ ಗೋಳಿತೊಟ್ಟು ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ಭಾಸ್ಕರ ಗೌಡ ಇಚ್ಚಿಲಂಪಾಡಿ, ಕೌಕ್ರಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಉದಯಕುಮಾರ್ ದೋಂತಿಲ, ಮಾಜಿ ಅಧ್ಯಕ್ಷರಾದ ಅಧ್ಯಕ್ಷರಾದ ಇಬ್ರಾಹಿಂ.ಎಂ.ಕೆ, ಹಿರಿಯರಾದ ಎಂ.ವಿ.ವ್ಯಾಸ, ಬ್ಯಾಂಕಿನ ಕಾನೂನು ಸಲಹೆಗಾರರಾದ ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಅವರು ಸಹಕರಿಸಿದರು.