23.5 C
Kadaba
Saturday, March 15, 2025

ಹೊಸ ಸುದ್ದಿಗಳು

ಕಡಬ: ಕಾಡು ಹಂದಿ ಮಾಂಸ ನೀಡುವುದಾಗಿ ಹಲವರಿಂದ ಹಣ ಪಡೆದು ಬೈಕ್ ನಲ್ಲಿ ಪರಾರಿ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್, ಪ್ರಮುಖ ಸುದ್ದಿ : ಇತ್ತೀಚೆಗೆ ಕಡಬ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತರ ಓಡಾಟ ಹೆಚ್ಚಾಗಿದೆ. ಅಲ್ಲಲ್ಲಿ ಕಳ್ಳತನ, ವಂಚನೆ ದೂರುಗಳು ಕೇಳಿಬರುತ್ತಿವೆ.  ಇದೀಗ   ಕಾಡು ಹಂದಿಯ ಮಾಂಸ ನೀಡುವುದಾಗಿ ಹಲವರಿಂದ ಹಣ ಪಡೆದ ಅಪರಿಚಿತ ವ್ಯಕ್ತಿಯೊಬ್ಬ  ಸ್ಥಳೀಯ ವ್ಯಕ್ತಿಯೊಬ್ಬರನ್ನು ಬೈಕ್ ನಲ್ಲಿ ಕರೆದೊಯ್ದು ಅರ್ಧ ದಾರಿಯಲ್ಲೇ ಬಿಟ್ಟು ಹೋಗಿ ವಂಚಿಸಿದ ಘಟನೆ ಫೆ. 11  ಎಡಮಂಗಲದಲ್ಲಿ ನಡೆದಿದೆ.

kadabatimes.in

ಗ್ರಾಮದ  ನಿವಾಸಿಗಳಿಗೆ ವಂಚಿದ  ವ್ಯಕ್ತಿಯು ತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸರೆಯಾಗಿದೆ.  ಎಡಮಂಗಲದ ಹಿರಿಯ ವ್ಯಕ್ತಿಯೊಬ್ಬರು  ಮಹಾಕಾಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ  ಬೈಕ್ ನಲ್ಲಿ ಬಂದ ವ್ಯಕ್ತಿ  “ಹಂದಿ ಮಾಂಸ ಇದೆ, ಬೇಕಾದರೆ ಕೊಡುತ್ತೇನೆ” ಎಂದು ನಂಬಿಸಿದ್ದ . ತುಳುವರ ಕೆಡ್ದಸವೂ ಆಗಿರುವ ಕಾರಣ ಮತ್ತು   ಕೆ.ಜಿ ಗೆ 300 ರೂ ಎಂದಿದ್ದರಿಂದ ಹಿರಿಯ ವ್ಯಕ್ತಿ   ಆತನ  ಬೈಕ್ ನಲ್ಲಿ ಹೋಗಿ  ಎಂ.ಎಸ್.ಎಲ್ ಶಾಪ್ ಬಳಿಯ  ಇತರ ವ್ಯಕ್ತಿಗಳ ಬಳಿಯೂ ತಿಳಿಸಿದಾಗ ಅವರೂ ಮಾಂಸ ಬೇಕು ಹೇಳಿದ್ದು  ಅವರಿಂದಲೂ ಸಾವಿರಾರೂ ರೂ   ಹಣ ಸಂಗ್ರಹಿಸಿ ಆತನಿಗೆ ನೀಡಿದ್ದರು.

kadabatimes.in

ಆ ಬಳಿಕ ಎಡಮಂಗಲ- ಕಡಬ ಸಂಪರ್ಕಿಸುವ   ಪಲೋಲಿ ಸೇತುವೆ ದಾಟಿ ಮುಂದಕ್ಕೆ ಆ ಹಿರಿಯ ವ್ಯಕ್ತಿಯನ್ನು ಬೈಕ್ ನಿಂದ ಇಳಿಸಿ   ಕ್ಷಣಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ ಹೋದಾತ ಬರಲೇ ಇಲ್ಲ.  ಇತ್ತ ಎಡಮಂಗಲದಲ್ಲಿ ಮಾಂಸಕ್ಕಾಗಿ ಕಾಯುತ್ತಿದ್ದವರು ಹಿರಿಯ ವ್ಯಕ್ತಿಯನ್ನು ತಡವಾಗಿ ವಿಚಾರಿಸಿದಾದ ಮೋಸ ಹೋಗಿರುವುದು ಗೊತ್ತಾಗಿದೆ. ಈ ಅಪರಿಚಿತ ಆಲಂಕಾರು ,ಮರ್ದಾಳ ಪರಿಸರದಲ್ಲೂ ವಂಚಿಸಿರುವ ಸುದ್ದಿಗಳು ಬಂದಿದೆ.

kadabatimes.in

ಹಣ ಪಡೆದು ಮೋಸ ಮಾಡಿದಾತನನ್ನು ಗ್ರಾಮದ ಕೆಲವರು ಆತನ ಚಹರೆ ಪತ್ತೆ ಹಚ್ಚಲು ಮುಂದಾಗಿದ್ದು ಇದರ ಭಾಗವಾಗಿ ಸಿಸಿ ಟಿವಿ ದೃಶ್ಯ ಸಂಗ್ರಹಿಸಿದ್ದಾರೆ. ಆತನ ವಾಹನ ನಂಬರ್ ನಕಲಿ ಎಂದು ಹೇಳಲಾಗುತ್ತಿದ್ದು  ಪೊಲೀಸರು  ಪೇಟೆಯಲ್ಲಿರುವ ಸಿಸಿಟಿವಿ ನೋಡಿದರೆ ಆತನ ಸುಳಿವು ಸಿಗಬಹುದೆಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಸಿ ಟಿವಿ ದೃಶ್ಯ ಇಲ್ಲಿದೆ:

kadabatimes.in