ಕಡಬ
ಟೈಮ್,ಪ್ರಮುಖ ಸುದ್ದಿ: ಜಾತಿ ನಿಂದನೆ ಪ್ರಕರಣದಲ್ಲಿ ಕುಟ್ರುಪಾಡಿ
ಗ್ರಾಮದ ವ್ಯಕ್ತಿಯೊಬ್ಬರನ್ನು
ಪುತ್ತೂರು ನ್ಯಾಯಾಲಯ
ದೋಷಮುಕ್ತಗೊಳಿಸಿದೆ.


![]() ![]() |
Image used
for representative purpose only


2020 ಜನವರಿ 2ರಂದು
ಕುಟ್ರುಪಾಡಿ ಗ್ರಾಮದ ಹೊಸಮಠ ಎಂಬಲ್ಲಿರುವ ಗರ್ಭಿಣಿ ಮಹಿಳೆಯನ್ನು ಭೇಟಿ ಮಾಡಲು ಜಯಶ್ರೀ ಎಂಬವರು ಹೋದಾಗ ಅಲ್ಲಿಯೇ ಪಕ್ಕದ ಮನೆಯ ವಾಸಿಯಾಗಿರುವ ರವಿ ಹೊಸ್ಮಠ ಎಂಬವರು
ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಹೋದ ಮನೆಯವರಲ್ಲಿ ಮನೆಯೊಳಗೆ ಕರೆಸಿ ಮಾತನಾಡಿಸದಂತೆ ಹೇಳಿದ್ದಲ್ಲದೆ ಜಾತಿ
ನಿಂದನೆ ಮಾಡಿ ಸಾಮಾಜಿಕ ಗೌರವಕ್ಕೆ ದಕ್ಕೆ ತಂದಿರುವುದಾಗಿ ಕಡಬ ಠಾಣೆಗೆ ದೂರು ನೀಡಿದ್ದರು.


ಪ್ರಕರಣ
ದಾಖಲಿಸಿಕೊಂಡ ಕಡಬ ಪೋಲಿಸರು ತನಿಖೆ
ನಡೆಸಿ ಆರೋಪಿ ರವಿಯ ವಿರುದ್ಧ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಪುತ್ತೂರುನಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ನ್ಯಾಯಾಲಯವು
16 ಸಾಕ್ಷಿಗಳನ್ನು ವಿಚಾರಣೆ ಮಾಡಿ 2025 ಜ.31ರಂದು ಪ್ರಾಸಿಕ್ಯೂಷನ್ ಪರ ಪುರಾವೆಯನ್ನು ಸಾಬೀತು
ಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬ ಕಾರಣದಿಂದ ಆರೋಪಿಯನ್ನು ದೋಷಮುಕ್ತಗೊಳಿಸಿದೆ. ಆರೋಪಿಯ
ಪರವಾಗಿ ಲೋಕೇಶ್ ಎಂ.ಜೆ ಕಡಬ,
ಕಕ್ವೆ ಕೃಷ್ಣಪ್ಪ ಗೌಡ, ಎ ಬಾಬು ಗೌಡ,
ರಶ್ಮಿ ಜಿ, ಸುಮನ ಎಂ ಇವರು ವಾದಿಸಿದ್ದರು.