ಕಡಬ ಟೈಮ್, ಸುಬ್ರಹ್ಮಣ್ಯ: ದಕ್ಷಿಣ
ಕನ್ನಡ ಜಿಲ್ಲೆಯ
ಕಡಬ ತಾಲೂಕಿನ ಸುಬ್ರಹ್ಮಣ್ಯ
ವಲಯ ಅರಣ್ಯ ವ್ಯಾಪ್ತಿಯಲ್ಲಿ ಬರುವ
ಕೊಲ್ಲಮೊಗ್ರ ಎಂಬ ಗ್ರಾಮದಲ್ಲಿ ವಿನಾಶದ ಅಂಚಿನಲ್ಲಿರುವ ಕೀರಲುಬೋಗಿ
ಜಾತಿಯ ಬೃಹತ್ ಮರಗಳ ಮರಣ ಹೋಮ ನಡೆದಿರುವುದು ಬೆಳಕಿಗೆ ಬಂದಿದೆ.




ರಕ್ಷಿತಾರಣ್ಯದ
ವ್ಯಾಪ್ತಿಯಲ್ಲೇ ಬರುವ ಈ ಪ್ರದೇಶದಲ್ಲಿ ಬೆಲೆಬಾಳುವ ಹಲವು ಮರಗಳು ಧರೆಶಾಹಿಯಾಗಿರುವ ಆರೋಪ ಕೇಳಿ ಬಂದಿದೆ . ಇದಕ್ಕೆ ಪೂರಕ
ಎಂಬಂತೆ ಜೊತೆಗೆ ಮರ ಕಡಿದು ಅವುಗಳನ್ನು ಸೈಜ್ ಮಾಡಿರುವ ವೀಡಿಯೋ, ಪೋಟೊಗಳು
ಮಾಧ್ಯಮಗಳಿಗೆ ಲಭ್ಯವಾಗಿದೆ.
ಜನಸಾಮಾನ್ಯರು
ಮರ ಕಡಿಯುವುದಾದರೆ ಅಥವಾ ಅರಣ್ಯದಿಂದ ಮರದ ಕಟ್ಟಿಗೆ ತೆಗೆಯಬೇಕೆಂದರೆ ಕಾನೂನುಗಳನ್ನು ಬೋಧಿಸುವ ಅರಣ್ಯಾಧಿಕಾರಿಗಳು
ಈ ವಿಚಾರದಲ್ಲಿ ನಿಯಮ ಉಲ್ಲಂಘಿಸಿರುವ ಬಲವಾದ ಆರೋಪ ವ್ಯಕ್ತವಾಗಿದೆ. ಯಾವುದೇ ಅನುಮತಿ
ಪಡೆಯದೆ ಮತ್ತು
ಸರ್ಕಾರಕ್ಕೆ ರಾಜಸ್ವ
ಪಾವತಿಸದೆ
ಅಕ್ರಮವಾಗಿ
ಮರಗಳನ್ನು ಕಡಿದು ಸಾಗಾಟ ಮಾಡಲು ಅನುಮತಿ ಮತ್ತು ಅವಕಾಶ
ನೀಡಿದವರು ಯಾರು ಎಂಬ ಪ್ರಶ್ನೆ ಎದ್ದಿದೆ.


ಮಾಹಿತಿಯ
ಪ್ರಕಾರ ಕಡಬ ತಾಲೂಕಿನ ಚಾರ್ವಾಕ ಪ್ರದೇಶಕ್ಕೆ ಈ ಮರದ ಸೈಜ್ ಗಳನ್ನು ಕೊಂಡೊಯ್ಯಲಾಗುತ್ತಿದೆ ಎನ್ನಲಾಗುತ್ತಿದೆ
.ಆದರೆ ಅರಣ್ಯಧಿಕಾರಿಗಳು ಪೂರಕ ಮಾಹಿತಿ ಒದಗಿಸಿಲ್ಲ. ಅಕ್ರಮವಾಗಿ ಮರಗಳನ್ನು ಕಡಿದ ವಿಚಾರದಲ್ಲಿ ರಾಜಕೀಯ
ಮುಖಂಡರು, ಅಧಿಕಾರಿಗಳು ಶಾಮಿಲು ಆಗಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು
ಅವರನ್ನು ಸಂಪರ್ಕಿಸಿದಾಗ ಈ ಬಗ್ಗೆ ಮಾಹಿತಿ ಪಡೆದು
ವಿಚಾರಿಸಲಾಗುವುದು ಎಂದಿದ್ದಾರೆ.


ದೂರು ದಾಖಲು: ಈ
ಘಟನೆಯ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ
(ಅರಣ್ಯ), ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿರುವುದಾಗಿ ತಿಳಿದು ಬಂದಿದೆ.