ಕಡಬ ಟೈಮ್, ಪ್ರಮುಖ ಸುದ್ದಿ: ಅವಿವಾಹಿತ ಯುವತಿಯೋರ್ವಳು
ಗರ್ಭಿಣಿಯಾಗಿರುವ ವಿಚಾರ ಕಡಬ ಠಾಣಾ ವ್ಯಾಪ್ತಿಯ ಗ್ರಾಮವೊಂದರಿಂದ ತಿಳಿದು ಬಂದಿದ್ದು ವೈದ್ಯಾಧಿಕಾರಿಗಳು ಆಕೆಯನ್ನು ಪರೀಕ್ಷಿಸಿ ಬಳಿಕ ಕಡಬ ಠಾಣೆಗೆ ಮಾಹಿತಿ ನೀಡಿದ ವಿಚಾರ ಬೆಳಕಿಗೆ ಬಂದಿದೆ.




ಅವಿವಾಹಿತ ಯುವತಿಗೆ ತಿಂದ ಆಹಾರವೆಲ್ಲ ವಾಂತಿಯಾದ ಹಿನ್ನೆಲೆ ಫೆ.3 ರಂದು ತನ್ನ ತಾಯಿ ಜೊತೆ ಕಡಬದ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆಗೆಂದು
ಬಂದಿದ್ದು ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಯುವತಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ವೈದ್ಯಾಧಿಕಾರಿಗಳು ತಮ್ಮ ಪಾಲನಾ ವರದಿಯಲ್ಲಿ ಗರ್ಭವತಿಯಾದ ಸಂದರ್ಭದಲ್ಲಿ ಆಕೆಗೆ
18 ವರ್ಷ ತುಂಬದ ಬಗ್ಗೆ ಜೊತೆಗೆ ತಾಯಿ ಕಾರ್ಡು ಮಾಡಿಸಿರುವುದಾಗಿ ಉಲ್ಲೇಖಿಸಿ ಪೊಲೀಸರಿಗೆ ಮತ್ತು ಐಸಿಡಿಎಸ್
ಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.


ಬಾಡಿಗೆ
ಮನೆಯೊಂದರಲ್ಲಿ ವಾಸವಿದ್ದ ಕುಟುಂಬ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮನೆಬಿಟ್ಟು ತೆರಳಿರುವುದಾಗಿ
ತಿಳಿದು ಬಂದಿದೆ. ಮರಳು ಸಂಬಂಧಿತ ಕೆಲಸದ ನಿಮಿತ್ತ ಬಂದಿದ್ದ ಇವರು ಗ್ರಾಮದಲ್ಲಿ ವಾಸವಿದ್ದರು ಎನ್ನಲಾಗಿದೆ. ಯುವತಿಯ ಗರ್ಭವತಿಯಾಗಲು ಸ್ಥಳೀಯನೊಬ್ಬ ಕಾರಣ ಎನ್ನಲಾಗುತ್ತಿದ್ದು ಅವರನ್ನು ಊರಿಗೆ ಕಳುಹಿಸಿರುವುದರ ಹಿಂದೆ ಯುವಕನನ್ನು ರಕ್ಷಿಸುವ ತಂತ್ರ ಅಡಗಿದೆಯೆ ಎಂಬ ಸಂಶಯ ವ್ಯಕ್ತವಾಗಿದೆ. ಅಲ್ಲದೆ ಈ ವಿಚಾರ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ .
ಕಡಬ ಪೊಲೀಸರು ಈ ವಿಚಾರದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿದು
ಬಂದಿದೆ. ಸದ್ಯ ಯಾವುದೇ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

