ಕಡಬ ಟೈಮ್, ರಾಮಕುಂಜ: ಜಿಲ್ಲಾಡಳಿತದ
ಸಹಭಾಗಿತ್ವದಲ್ಲಿ ಕೊಯಿಲ ಪ್ರಾಥಮಿಕ ಆರೋಗ್ಯಕೇಂದ್ರ ವಠಾರದಲ್ಲಿ ನಡೆಯುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತರ
ಪುನರ್ವಸತಿ ಕೇಂದ್ರದ ನಿರ್ವಹಣಾ ಜವಾಬ್ದಾರಿಯನ್ನು ಬೆಂಗಳೂರಿನ ಉದ್ಧವ್ ಶೈಕ್ಷಣಿಕ ಮತ್ತು ಗ್ರಾಮೀಣ
ಅಭಿವೃದ್ಧಿ ಸಂಸ್ಥೆಗೆ ಹಸ್ತಾಂತರಿಸಲಾಗಿದೆ.




ಕೇಂದ್ರದ
ನಿರ್ವಹಣಾ ಜವಾಬ್ದಾರಿಯನ್ನು ಹೊತ್ತಿದ್ದ ಬೆಳ್ತಂಗಡಿಯ ಸಿಯೋನ್ ಆಶ್ರಮ ಟ್ರಸ್ಟ್‌ನ ಟೆಂಡರ್ ಅವಧಿ
ಜ.31ರಂದು ಮುಗಿದಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶದಂತೆ ಉದ್ಭವ್ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಅಧಿಕಾರ ಹಸ್ತಾಂತರಿಸಲಾಗುತ್ತಿದೆ.


ಬೆಳ್ತಂಗಡಿಯ ಸಿಯೋನ್ ಆಶ್ರಮ ಟ್ರಸ್ಟ್ ನ ಮುಖ್ಯಥ ಯು.ಸಿ ಪೌಲೋಸ್
ಅವರು ಶನಿವಾರದಂದು ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಜೆಸಿಂತಾ ಡಿಸೋಜ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಸೋಮವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರು ಉದ್ಭವ್ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿಸಂಸ್ಥೆಯ
ಮುಖ್ಯಸ್ಥೆ ಚಂದ್ರಕಲಾ ಹಾಗೂ ಚಿದಾನಂದ್ ಅವರಿಗೆನಿರ್ವಹಣಾ ಅಧಿಕಾರವನ್ನು ಹಸ್ತಾಂತರಿಸಿದರು.
ಜಿಲ್ಲಾ
ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಕುಮಾರ್, ಜಿಲ್ಲಾಎಂಡೋ ಸಲ್ಮಾನ್ ಸಂಯೋಜಕ ಸಾಜುದ್ದೀನ್, ತಾಲೂಕು
ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಕೊಯಿಲ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ರವಿಶಂಕರ್, ಹಿರಿಯ ಆರೋಗ್ಯ
ಸುರಕ್ಷಾಧಿಕಾರಿ ಮರಿಯಮ್ಮ, ಹಿರಿಯ ನಿರೀಕ್ಷಣಾಧಿಕಾರಿ ಉಮೇಶ್, ಕೊಯಿಲ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ
, ಸುಭಾಶ್ ಶೆಟ್ಟಿ ಹಾಜರಿದ್ದರು.


The management responsibility of the Endosulfan Victim Rehabilitation Center at Koila is now with the new organization